ನೆಹರು ಮೆಮೋರಿಯಲ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕುಲದೀಪ್ ಪೆಲ್ತಡ್ಕ ಇವರು ಕ್ಯಾಲಿಕಟ್ ಯೂನಿವರ್ಸಿಟಿಯ ಜಾಮಿಯಾ ಸಲಫಿಯಾ ಫಾರ್ಮಸಿ ಕಾಲೇಜು, ಮಲಪ್ಪುರಂ, ಕೇರಳ ಇಲ್ಲಿ ಫೆಬ್ರವರಿ 10ರಂದು “ಅಡ್ವಾನ್ಸ್‌ಸಿಂಗ್ ಹೆಲ್ತ್‌ಕೇರ್ ಫ್ರಾಂಟಿಯರ್ಸ್: ಆಧುನಿಕ ಡ್ರಗ್ ಡಿಸ್ಕವರಿಯಲ್ಲಿ ಫಾರ್ಮಾ ಸಂಶೋಧನೆಯ ಪಾತ್ರ ಮತ್ತು ಮಹತ್ವ” ವಿಷಯವಾಗಿ ನಡೆದ ಒಂದು ದಿನದ ರಾಷ್ಟ್ರೀಯ ವಿಜ್ಞಾನ ವಿಚಾರ ಸಂಕಿರಣದಲ್ಲಿ ಭಾಗವಹಿಸಿ “ಇಂಡಿಜಿನಸ್ ಪ್ಲಾಂಟ್ಸ್ ಯೂಸ್ಡ್ ಫಾರ್ ದಿ ಟ್ರೀಟ್ಮೆಂಟ್ ಆಫ್ ಮೆನ್ಸ್ಟ್ರವಲ್ ಪ್ರಾಬ್ಲಮ್ಸ್ ಇನ್ ವೆಸ್ಟ್ ಕೋಸ್ಟ್ ಆಫ್ ಕರ್ನಾಟಕ ಸ್ಪೆಷಲ್ ರೆಫರೆನ್ಸ್ ಟು ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್” ಎಂಬ ವಿಷಯವಾಗಿ ಸಂಶೋಧನಾ ವಿಚಾರವನ್ನು ಮಂಡಿಸಿ ಸಸ್ಯಶಾಸ್ತ್ರ ವಿಭಾಗದಲ್ಲಿ ಬೆಸ್ಟ್ ಪ್ರೆಸೆಂಟೇಟರ್ ಅವಾರ್ಡನ್ನು ಪಡೆದುಕೊಂಡಿರುತ್ತಾರೆ.
ಇವರು ಡಾ. ಶೋಭಾ ಮಾರ್ಗದರ್ಶನದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಕಳೆದ ಹನ್ನೊಂದು ವರ್ಷಗಳಿಂದ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಭೋದಕ ಭೋದಕೇತರ ವೃಂದದವರು ಅಭಿನಂದನೆ ಸಲ್ಲಿಸಿದರು.
