ಸುಳ್ಯ ನಗರ ವ್ಯಾಪ್ತಿಯ ಜಟ್ಟಿಪಳ್ಳದ ಕಾನತ್ತಿಲ ಸ್ಟೋರ್ ಬಳಿಯಲ್ಲಿನ ಕಶ್ಯಪ್ ಕಾಂಪೌಂಡ್ ಆವರಣದಲ್ಲಿದ್ದ ಪಾಳು ಬಾವಿಯೊಂದರಲ್ಲಿ ಸಣ್ಣ ಕರು ಒಂದು ಬಿದ್ದಿದ್ದು ಸುಳ್ಯ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಬಂದು ಮೇಲಕ್ಕೆತ್ತಿ ಕಾಪಾಡಿದರು.

ಸಂಜೆ ಸುಳ್ಯ ಬಜಾಜ್ ಶೋರೂಮ್ ಮಾಲಕ ರಮಾನಾಥ ಕಾನತ್ತಿಲರವರ ಮಗಳು ಕರಿಷ್ಮಾ ಮತ್ತು ಸ್ನೇಹಿತೆ ವಾಕಿಂಗ್ ಬರುತ್ತಿದ್ದಾಗ ಸಮೀಪದಲ್ಲಿ ಕರುವೊಂದು ಕೂಗುವ ಶಬ್ದ ಕೇಳಿ ನೋಡಿದಾಗ ಪಾಳು ಬಾವಿಯೊಂದರಲ್ಲಿ ಕರು ಬಿದ್ದಿರುವುದನ್ನು ಗಮನಿಸಿ ಯಜ್ಞೇಶ್ ಕಾನತ್ತಿಲ ಮತ್ತು ಮನೆಯವರಿಗೆ ವಿಷಯ ತಿಳಿಸಿದರು. ನಂತರ ಸುಳ್ಯ ಅಗ್ನಿಶಾಮಕ ಠಾಣೆಗೆ ಸಂಪರ್ಕಿಸಿ ಬರಹೇಳಲಾಯಿತು. ಕೂಡಲೇ ಆಗಮಿಸಿದ ಸಿಬ್ಬಂದಿಗಳು ಅಗತ್ಯ ಸಲಕರಣೆಗಳನ್ನು ಬಳಸಿ ಸುಮಾರು 25 ಅಡಿ ಆಳದಿಂದ ಕರುವನ್ನು ಮೇಲಕ್ಕೆತ್ತಿ ರಕ್ಷಿಸಿದರು. ಸ್ಥಳೀಯರಾದ ಯಜ್ಞೇಶ್ ಕಾನತ್ತಿಲ, ಕುಲದೀಪ್ ಪೆಲ್ತಡ್ಕ, ಚೇತನ್ ಜಟ್ಟಿಪಳ್ಳ, ಸಾಗರ್ ರೈ ಇನ್ನಿತರರು ಸಹಕರಿಸಿದರು.

ರಕ್ಷಿಸಿದ ಕರುವಿಗೆ ಸೂಕ್ತ ಆಹಾರ ನೀಡಿದ್ದು ದಿನಕರ ಕಾನತ್ತಿಲರವರ ಆರೈಕೆಯಲ್ಲಿದೆ. ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಜಯಂತಿ ದಿನಕರ ಕಾನತ್ತಿಲರವರು ಐಸ್ ಕ್ರೀಮ್ ನೀಡಿ ಉದಾರತೆ ಮೆರೆದರು.

Leave a Reply

Your email address will not be published. Required fields are marked *