ಬಾಲ್ಯದಲ್ಲಿ ಮಾಡುವ ಸಣ್ಣ ತಪ್ಪುಗಳಿಗೆ ಕ್ಷಮೆ ನೀಡುತ್ತಾರೆ,
ಆದರೆ ಆಗೇ ಅಲ್ಲ ಯೌವನಕ್ಕೆ ಕಾಲಿಟ್ಟಾಗ ಯೌವನವನ್ನು ವ್ಯರ್ಥಗೊಳಿಸಬಾರದು,
ಅಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಳ್ಳವ ಮುನ್ನ ಸಮಯವು ದೂರ ಹಾದು ಹೋಗಿರುತ್ತೆ,

ವಾರ್ದಕ್ಯದ ಇದೆ ಅಲ್ಲಿ ತಿದ್ದಿ ಕೊಳ್ಳುವ ಎಂಬುದು ಬೇಡ ಅದರ ಗ್ಯಾರಂಟಿ ದೇವನೇ ಬಳ್ಳ,

ಹೂ ಅರಳಿ ಕಾಯಿಯಾಗಿ ಹಣ್ಣು ಆಗುವ ಮುನ್ನವೇ ವಿವಿಧ ಸ್ಥರದಲ್ಲಿಯೇ ಒಣಗಿ ಹೋಗುವ ಗಿಡ ಮರಗಳನ್ನು ನಾವು ಕಂಡಿದ್ದೇವೆ, ಇದೇ ಸಾಕು ನಮ್ಮ ಜೀವನ ಇಷ್ಟೇ ಎಂಬುವದನ್ನು ಅರಿಯಲು.

ವಾರ್ದಕ್ಯದಲ್ಲಿ ಸಾಷ್ಟಾoಗಕ್ಕೆ ಹೋಗಲು ಆರೋಗ್ಯಬೇಕು.
ನೀ ಯೌವನದಲ್ಲಿ ಮಾದಕ ವ್ಯಸನಿಯಾದರೆ ವಾರ್ದಕ್ಯದಲ್ಲಿ ಆರೋಗ್ಯ ಇರುತ್ತಾ…?
ಅದರ ಅಮಲಿನಿಂದ ವಾರ್ದಕ್ಯ ಕಾಣದೆ ಯೌವನ ಪೂರ್ಣಗೊಳಿಸಲು ಸಾಧ್ಯವಾಗದೆ ಇಹ ಲೋಕ ತ್ಯಜಿಸಿದವರು ಇಲ್ವಾ,
ಪರದಲ್ಲಿಯೇ ಹಾಸಿಗೆ ಹಿಡಿದು ಕೊಳೆತ ದೇಹಗಳನ್ನು ನಾವು ಕಂಡಿಲ್ಲವೇ…

ಸ್ವಲ್ಪ ಸಮಯದ ನಶೆಗೆ ಬೇಕಾಗಿ ಸಂಪೂರ್ಣ ಜೀವನ ಹಾಳು ಮಾಡುದಾದರೂ ಯಾತಕ್ಕೆ..

ನಶೆಯಿಂದ ನಾಶ ಇದೇ ಎಂದೂ ಗೊತ್ತಿದ್ದರೂ ಅದನ್ನು ಹಿಂಬಾಲಿಸುತ್ತಿರುವುದೇ ಒಂದು ನಶೆ.

ಸೃಷ್ಟಿಸಿದ ದೇವರಿಗೆ ಧನ್ಯವಾದ ಅರ್ಪಿಸ ಬೇಕಾದ ದೇಹವನ್ನು ಸ್ವಯಂ ನಾಶಗೊಳಿಸುವುದು ಆತ್ಮಹತ್ಯೆಯಲ್ಲವೇ…

ನಶೆ ಏರಿದರೆ ನಾಶವಲ್ಲ ವಿನಾಶವೇ…

ನಶೆಯ ಅಥವಾ ಮಾದಕ ವ್ಯಸನದ ವಿರುದ್ಧ ಎಲ್ಲಾ ಮಾತಾನಾಡಬೇಕು
ಜೊತೆಗೆ ಅದನ್ನು ಸಂಪೂರ್ಣವಾಗಿ ಮುಕ್ತ ಗೊಳಿಸಲು ಪಣ
ತೊಡಬೇಕು.

✍🏻ಫಾರೂಕ್ ಕಾನಕ್ಕೋಡ್

Leave a Reply

Your email address will not be published. Required fields are marked *