ನಮ್ಮ ಸಮಾಜದಲ್ಲಿ ದಿನನಿತ್ಯ ಕೇಳುತ್ತಿರುವ ಶಬ್ದವಾಗಿದೆ ಸ್ವಂತ ತಂದೆ ತಾಯಿ ಒಡಹುಟ್ಟಿದವರನ್ನು ತಮ್ಮ ಕೈಗಳಿಂದಲೇ ಕೊಲ್ಲುವಂತಹ ಹೀನಾಯ ಕೃತ್ಯಗಳು, ಇದನ್ನು ಮಾಡುವಂತಹ ಯುವಕರೇ ಇದು ಹೇಗೆ ಸಾಧ್ಯವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಗಾಂಜಾ, MDM ಎಂಬ ಮಾದಕ ವ್ಯಸನಗಳು. ಇದನ್ನು ಉಪಯೋಗಿಸಿ ನಿಮ್ಮ ಜೀವನದ ಸುಂದರ ಕ್ಷಣಗಳನ್ನು ನಿಮ್ಮಿಂದಲೇ ಕೊನೆಗೊಳಿಸುವಂತಹ ಅಪಾಯಕಾರಿಯಾದ ಪರಿಸ್ಥಿತಿಗೆ ನಿಮ್ಮ ಜೀವನವನ್ನು ಕೊಂಡೊಯ್ಯಲು ಸಾಧ್ಯವಾಗುವ ಸ್ಥಿತಿಗತಿ ನಿರ್ಮಾಣವಾಗುತ್ತಿದೆ. ಇದರ ಬಗ್ಗೆ ನೀವು ಅರಿಯಬೇಕು ಯುವ ಸಮುದಾಯದ ಯುವಕರೇ, ಇದು ನಿಮಗೆ ಮಾರಕವೇ ಹೊರತು ಯಾವುದೇ ರೀತಿಯ ಸಂತೋಷವನ್ನು ನೀಡಲು ಎಂದಿಗೂ ನಿಮಗೆ ಸಾಧ್ಯವಿಲ್ಲ. ಆದುದರಿಂದ ಇಂತಹ ಚಟಗಳಿಗೆ ಬಲಿಯಾಗದಿರಿ. ಇದರಿಂದಾಗಿ ನಿಮ್ಮನ್ನು ಪ್ರೀತಿಸುವಂತಹ, ನಿಮ್ಮ ಹೆತ್ತವರು ನಿಮ್ಮ ಒಡಹುಟ್ಟಿದವರು, ನಾಶ ಹೊಂದುವ ಸ್ಥಿತಿಗೆ ನೀವೇ ಕಾರಣವಾಗುತ್ತೀರಿ, ಆದುದರಿಂದ ಇದರ ಬಗ್ಗೆ ನಿರಂತರವಾಗಿ ನಾವು ಚಿಂತಿಸಬೇಕು ಹಾಗೂ ದಾರಿ ತಪ್ಪುತ್ತಿರುವ ನಮ್ಮ ಯುವಕರಿಗೆ ಒಳ್ಳೆಯ ದಾರಿಯನ್ನು ಸಾಗಿಸುವ ಒಳ್ಳೆಯ ಅಭ್ಯಾಸಗಳನ್ನು ಮಾಡುವ ದಾರಿಯನ್ನು ನಾವು ರೂಪಿಸಿಕೊಳ್ಳಬೇಕು.

ನಾವು ಸಂತೋಷದಿಂದ ಇರಬೇಕಾದರೆ ನಮ್ಮ ತಂದೆ ತಾಯಿಗಳು ಹಾಗೂ ನಮ್ಮ ಒಡಹುಟ್ಟಿದವರು ಸಂತೋಷದಲ್ಲಿದ್ದರೆ ಮಾತ್ರವೇ ಸಾಧ್ಯವಾಗುವುದು. ಅವರ ಕಣ್ಣೀರಿಗೆ ನೀವು ಯಾವತ್ತೂ ಕಾರಣವಾಗದಿರಿ, ತಂದೆ ತಾಯಿಗಳನ್ನು ಪ್ರೀತಿಸುತ್ತಾ ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ನಮ್ಮ ಸಮಾಜಕ್ಕೆ ನಮ್ಮ ಊರಿಗೆ ಒಳ್ಳೆಯ ಕೀರ್ತಿಯನ್ನು ತರುವ ಸಾಲಿನಲ್ಲಿ ಯುವಕರು ಬೆಳೆಯಲಿ ಹಾಗೂ ಯುವ ಪೀಳಿಗೆಯನ್ನು ರಕ್ಷಿಸೋಣ ಇದರಿಂದ ಎಲ್ಲರೂ ದೂರ ಸರಿದು ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಕೈಜೋಡಿಸೋಣ ಹಾಗೂ ಎಲ್ಲರ ಜೀವನ ಸುಂದರ ಸಂತೋಷದಿಂದ ಕನಸುಗಳನ್ನು ಕಾಣುತ್ತಾ ಉತ್ತಮ ರೀತಿಯಲ್ಲಿ ಸಾಗಲಿ ಎಂದು ಹಾರೈಸುತ ನನ್ನ ಬರವಣಿಗೆ ವಿರಮಿಸುತ್ತೇನೆ.
🖊️ ರಿಯಾಝ್ ಕಾರ್ಲೆ