ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಟಾನ (ರಿ ) ಆರಂತೋಡು ಇದರ ವತಿಯಿಂದ ಇತ್ತೀಚೆಗೆ ಸುಳ್ಯ ಯೋಜನಾ ಪ್ರಾಧಿಕಾರ (ಸೂಡ ) ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೆ. ಎಂ. ಮುಸ್ತಫ ರನ್ನು ಸನ್ಮಾನಿಸಲಾಯಿತು
ಅಧ್ಯಕ್ಷತೆಯನ್ನು ಕೆಪಿಸಿಸಿ ರಾಜ್ಯ ಪ್ರದಾನ ಕಾರ್ಯದರ್ಶಿ ಟಿ. ಎಂ. ಶಹೀದ್ ತೆಕ್ಕಿಲ್ ವಹಿಸಿದ್ದರು
ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೇಶ್ವರ ಸಿದ್ಧ ಪುರುಷ ಮಠ ಮರ್ಕoಜ ಇದರ ಧರ್ಮದರ್ಶಿ ರಾಜೇಶ್ ನಾಥ್ ಜೀ ಮಾತನಾಡಿ ಇಂತಹ ಸಮಾರಂಭ ಗಳು ದೇಶದ ಭಾವೈಕ್ಯ ತೆಯ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡ ಬಲ್ಲದು ಪ್ರೀತಿ, ವಿಶ್ವಾಸ ಮಾತ್ರ ದೇವ ದರ್ಶನ ದ ಮುಖ್ಯ ಭಾಗ ಎಂದರು
ಸಮಾರಂಭ ದಲ್ಲಿ ಸುಳ್ಯ ಸೈoಟ್ ವಿಕ್ಟರ್ಸ್ ಚರ್ಚ್ ಧರ್ಮ ಗುರು ಫಾ. ವಿಕ್ಟರ್ ಡಿ ‘ಸೋಜಾ, ಆರಂತೋಡು ಜುಮಾ ಮಸ್ಜಿದ್ ಖತೀಬರಾದ ಅಲ್ ಹಾಜ್ ಇಸ್ಮಾಯಿಲ್ ಫೈಝಿ, ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾ ನಂದ ಮಾವಜಿ, ಸುಳ್ಯ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಾಮೊಟ್ಟೆ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಶದ್ದೀನ್, ಉಪ ಅರಣ್ಯ ಸಂರಕ್ಷಣಧಿಕಾರಿ ಪ್ರವೀಣ್ ಶೆಟ್ಟಿ, ಆರಎಫಓ ಮಂಜುನಾಥ್ ಧುರೀಣರುಗಳಾದ ಇಬ್ರಾಹಿಂ ಹಾಜಿ ಕತ್ತರ್,ಅಲ್ಪ ಸಂಖ್ಯಾತ ಸಹಕಾರಿ ಸಂಘ ದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿ ಮಲೆ,ರಾಧಕೃಷ್ಣ ಬೊಳ್ಳುರು, ಚೇತನ್ ಕಜೆಗದ್ದೆ, ಗೋಕುಲ್ ದಾಸ್, ಭವಾನಿ ಶಂಕರ್, ದಾಮೋದರ ಮಾಸ್ಟರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು
ಅಶ್ರಫ್ ಗುಂಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *