
ಸುಳ್ಯ ಕೇಂದ್ರ ( ಮುಹಿಯದ್ದೀನ್ ಜುಮಾ) ಮಸೀದಿಯಲ್ಲಿ ಧಾರ್ಮಿಕ ಶ್ರದ್ಧಾ ಭಕ್ತಿ ಯೊಂದಿಗೆ ಸಂಭ್ರಮದ ಈದುಲ್ ಫಿತ್ರ್ ಹಬ್ಬವನ್ನು (31/03/2025) ಆಚರಿಸಲಾಯಿತು
ಇಂದು (31/03/2025) ಸೂರ್ಯೋದಯ ಏಕ ದೇವ ಸ್ಮರಣೆ ( ತಕ್ಬೀರ್ ದ್ವನಿ) ಯಿಂದ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮ ಬೆಳಗಿನ ಜಾವ 7.30 ಕ್ಕೆ ಅರ್ಥಪೂರ್ಣ ಈದ್ ಸಂದೇಶ ಹಾಗೂ ಈದ್ ನಮಾಝ್ ನ್ನು ಖತೀಬ್ ರಾದ ಆಶ್ರಫ್ ಕಾಮೀಲ್ ಸಖಾಫಿ ನೆರವೇರಿಸಿದರು. ತನ್ನನ್ನು ಸ್ವಯಂ ಆತ್ಮ ಸಂಸ್ಕರಣೆ ಗೆ ಒಳಪಡಿಸಿ ಧ್ಯಾನದಲ್ಲಿ ನಿರತರಾದ ಸತ್ಯ ವಿಶ್ವಾಗಳಿಗೆ ಈದುಲ್ ಫಿತ್ರ್ ಹಬ್ಬ ಅರ್ಥಪೂರ್ಣ ವಾಗಿ ಅರ್ಪಣೆ ಯಾಗಲಿದೆ. ಆತ್ಮ ಸಂಸ್ಕರಣೆ (Self-Reformation) ಎಂದರೆ ತನ್ನ ಆಲೋಚನೆ, ನಡವಳಿಕೆ, ಮತ್ತು ಭಾವನೆಗಳನ್ನು ಸಕಾರಾತ್ಮಕವಾಗಿ ಪರಿವರ್ತಿಸಿಕೊಳ್ಳುವ ಪ್ರಕ್ರಿಯೆ. ಇದು ವ್ಯಕ್ತಿಯ ಆತ್ಮವಿಕಾಸದ ದಾರಿಯಲ್ಲಿ ನಿರಂತರವಾದ ಪ್ರಯತ್ನ ಮತ್ತು ಪ್ರಗತಿಯನ್ನು ಒಳಗೊಂಡಿರುತ್ತದೆ. ಇದರ ಮೂಲ ಉದ್ದೇಶವೆಂದರೆ ತನ್ನ ದೋಷಗಳನ್ನು ಗುರುತಿಸಿ, ಅವುಗಳನ್ನು ಸರಿಪಡಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸುವುದು.ಮತ್ತು ಮುಂದಿನ ಜೀವನದಲ್ಲಿ ಅಳವಡಿಸುವುದು ಆಗಿರುತ್ತದೆ ಎಂದು ಉಲ್ಲೇಖಿಸಿದರು ಮುಂದುವರಿದು ಇಂದು ಮಾದಕ ವಸ್ತುಗಳು ಸಮಾಜದಲ್ಲಿ ನೆಲೆಯೂರಿರುವ ಗಂಭೀರ ಸಮಸ್ಯೆ ಅಗಿದೆ ಮಾತ್ರವಲ್ಲ ಆತಂಕ ಸೃಷ್ಟಿಯಾಗುವಂತ ಘಟನೆಗಳು ನಡೆಯುತ್ತಿದೆ ಇದರ ಜಾಲ ದಿನ ದಿಂದ ದಿನಕ್ಕೆ ವ್ಯಾಪಿಸುತ್ತಿದೆ ಯುವಜನತೆಯ ಮೇಲೆ ಅತ್ಯಂತ ಪರಿಣಾಮಕಾರಿ ಪ್ರಭಾವ ಬೀರುತ್ತದೆ ಯುವಜನತೆಯ ಬಾಳನ್ನೆ ನಾಶಮಾಡುತ್ತದೆ ಸರಕಾರಗಳು ಈ ವಿಚಾರವಾಗಿ ಕಾನೂನನ್ನು ಮತ್ತಷ್ಟು ಬಲಿಷ್ಠ ಗೊಳಿಸಬೇಕು ಮಾದಕವಸ್ತು ವಿಗೆ ನಿಷೇಧ ಹೆರಲು ಕಟ್ಟುನಿಟ್ಟಿನ ಆಜ್ನೆ ಪಾಲನೆ ಯಾಗಬೇಕು ಮಾದಕ ಪಿಡುಗು ಸಮಸ್ಯೆಗೆ ಸಾಮೂಹಿಕ ಪ್ರಯತ್ನಗಳೇ ಪರಿಹಾರ. ಸಮಾಜದ ಪ್ರತಿಯೊಬ್ಬರ ಸಹಕಾರ ಇಲ್ಲಿ ಗಂಭೀರವಾಗಿ ಅಗತ್ಯವಿದೆ. ಎಂದು ಜಾಗೃತಿ ಮೂಡಿಸಿದರು.


MJM ಮೊಗರ್ಪಣೆ: ನಾವೆಲ್ಲರೂ ಪವಿತ್ರ ಇಸ್ಲಾಂ ಧರ್ಮವನ್ನು ಪಾಲಿಸುವವರಾಗಿದ್ದು ನಮ್ಮ ಪೈಗಂಬರ್ ಮುಹಮ್ಮದ್ ಸ.ಅ ರವರು ತೋರಿಸಿ ಕೊಟ್ಟ ಸನ್ಮಾರ್ಗದಲ್ಲಿ ಜೀವಿಸಬೇಕಾಗಿದೆ.
ಯಾರಿಗೂ ನೋವು ನೀಡದೆ ಯಾರನ್ನು ದ್ವೇಷಿಸದೆ ಸಮಾಜದಲ್ಲಿ ಜಾತಿ ಮತ ಭೇದವನ್ನು ಮರೆತು ಪರಸ್ಪರ ಪ್ರೀತಿ ವಿಶ್ವಾಸದ ಜೀವನ ಮಾಡಬೇಕು ಎಂದು ಹಾಫಿಲ್ ಶೌಖತ್ ಅಲಿ ಸಖಾಫಿ ರವರು ಮೊಗರ್ಪಣೆ ಮುಹಿಯದ್ದೀನ್ ಜುಮ್ಮಾ ಮಸ್ಟಿದ್ ನಲ್ಲಿ ಮಾ 31 ರಂದು ಪವಿತ್ರ ರಂಜಾನ್ ಹಬ್ಬದ ಈದ್ ಫಿತರ್ ಆಚರಣೆಯಲ್ಲಿ ಈದ್ ಸಂದೇಶವನ್ನು ನೀಡಿದರು.

ಬದ್ರಿಯ ಜುಮಾ ಮಸೀದಿ ಪೈಚಾರಿನಲ್ಲಿ ವಿಜೃಂಭಣೆಯಿಂದ ಈದ್ ಫಿತ್ರ್ ಹಬ್ಬವನ್ನು ಆಚರಿಸಲಾಯಿತು.

ಹಾಜಿರ ಹಸ್ಸನ್ ಮಸೀದಿಯಲ್ಲಿ ಸಂಭ್ರಮದ ಈದ್-ಉಲ್- ಫಿತ್ರ್ ಹಬ್ಬವದ ವಿಶೇಷ ಪ್ರಾರ್ಥನೆ ನಡೆಯಿತು. ರಮದಾನ್ ನಲ್ಲಿ ಉಳಿಸಿ-ಬೆಳಸಿಕೊಂಡು ಬಂದ ಅದೇ ಹಾದಿಯನ್ನು ಮುಂದಿನ ಜೀವನದಲ್ಲಿ ಅಳವಡಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಝಕರಿಯ ನದ್ವಿ ಉಸ್ತಾದರು ಕರೆ ನೀಡಿದರು.

ಸಂಪಾಜೆ : ಮಾರ್ಚ್ 31 ರಂದು ಅಲ್ ಇಸ್ಲಾಹಿ ಸಲಫಿ ಜುಮ್ಮಾ ಮಸ್ಜಿದ್ ನಲ್ಲಿ ಈದ್ ಉಲ್ ಫಿತ್ರ್ ಹಬ್ಬದ ವಿಶೇಷ ಪ್ರಾರ್ಥನೆ (ಈದ್ ನಮಾಜ್) ನಡೆಯಿತು.
ಮಸೀದಿ ಖತೀಬರಾದ ಶಮೀರ್ ಮೆಹಬೂಬ್ ಕೊಡಗುರವರು ಶಾಂತಿ, ಸೌಹಾರ್ದತೆ, ಸಹಭಾಳ್ವೆ ಪ್ರತೀಕವಾದ ಈದ್ ಎಲ್ಲರಲ್ಲಿ ಸಂತೋಷವನ್ನು ಹರಸಲಿ ಎಂದು ಸಂದೇಶ ಸಾರಿದರು ಈದ್ಗಾ ನಲ್ಲಿ ಮಸೀದಿ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದರು.

ಮುಹಿಯದ್ದಿನ್ ಜುಮಾ ಮಸೀದಿ ಪೆರಾಜೆಯಲ್ಲಿ ನಡೆದ ಈದುಲ್ ಫಿತರ್ ಸಾಮೂಹಿಕ ಪ್ರಾರ್ಥನೆಗೆ ಖತಿಭರಾದ ಅಶ್ರಫ್ ಸಅದಿ ನೇತೃತ್ವ ನೀಡಿ ಖುತುಬಾ ನೆರವೇರಿಸಿದರು. ನಿರ್ಗಮಿಸುತ್ತಿರುವ ಖತೀಬ್ ಉಸ್ತಾದರಾದ ಬಹು ಅಶ್ರಫ್ ಸಅದಿ ನೆಲ್ಯಾಡಿ ಹಾಗೂ ಹನೀಫ್ ಝಯ್ನಿ ಉಸ್ತಾದರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು, ಸರ್ವ ಜಮಾಅತ್ ಸದಸ್ಯರು ಉಪಸ್ಥಿತರಿದ್ದರು.

ಸುನ್ನಿ ಮುಸ್ಲಿಂ ಜುಮಾ ಮಸೀದಿಯಲ್ಲಿ ಸಂಭ್ರಮ ಸಡಗರದ ಆಚರಣೆ ನಡೆಯಿತು, ಈದ್ ಪ್ರಯುಕ್ತ ಮಸೀದಿಯಲ್ಲಿ ಈದ್ ಸಂದೇಶ ಈದ್ ನಮಾಜ್ ಸಾಮೂಹಿಕ ಪ್ರಾರ್ಥನೆ ನಡೆಯಿತು ಈದ್ ಸಂದೇಶ ಭಾಷಣದಲ್ಲಿ ಮಸೀದಿ ಖತೀಬ್ ಮಹಮ್ಮದ್ ಸಖಾಫಿ ಅಲ್ ಹಿಕಮಿ ಸಹೋದರಿಯತೆ ಮತ್ತು ಭಾತೃತ್ವವನ್ನು ಸಾರುವ ಹಬ್ಬವಾಗಿದೆ ಈದ್, ಬಡವ ಮತ್ತು ಶ್ರೀಮಂತನಿಗೆ ಹಸಿವು ಎಂದರೆ ಏನು ಎಂಬ ಅನುಭವವನ್ನು ನೀಡುವ ಆಚರಣೆಯಾಗಿದೆ ರಂಝಾನ್ ಎಂದು ಹೇಳಿದರು, ಕಾರ್ಯಕ್ರಮದಲ್ಲಿ ಸದರ್ ಮುಅಲ್ಲಿಂ ನೌಶಾದ್ ಫಾಳಿಲಿ, ಜಮಾಅತ್ ಅಧ್ಯಕ್ಷ ಹಾಜಿ ಎಸ್ ಮೊಯಿದಿನ್ ಕುಂಞಿ, NIA ಅಧ್ಯಕ್ಷ ಹನೀಫ್ ಎಸ್ ಪಿ, ಸಹಿತ ಜಮಾಅತ್ ಪದಾಧಿಕಾರಿಗಳು, ಸರ್ವ ಸದಸ್ಯರು, ಊರಿನ ಹಿರಿಯ ಕಿರಿಯ ಜಮಾಅತಿನ ಸರ್ವರು ಭಾಗಿಯಾಗಿದ್ದರು.

ದುಗಲಡ್ಕ ಮುಹೀಯಧ್ಧೀನ್ ಜುಮ್ಮಾಮಸೀದಿಯಲ್ಲಿ ಈದ್ ಆಚರಣೆ ಸಂಭ್ರಮದಲ್ಲಿ ನಡೆಯಿತು
ಸಯ್ಯದ್ ಪಝಲ್ ಕೊಯಮ್ಮತಂಙಳ್ ಖುತುಬ ನಿರ್ವಹಿಸದರು ಸಯ್ಯದ್ ಝೖನುಲ್ ಆಬಿದಿನ್ ತಂಙಳ್ ಈದ್ ಸಂದೇಶ ನೀಡಿದರು
ಜಮಾಅತರು ಪರಸ್ಪರ ಶುಭಾಶಯ ಹಂಚಿಕೊಂಡರು, ಸರ್ವ ಜಮಾಅತ್ ಸದಸ್ಯರು ಉಪಸ್ಥಿತರಿದ್ದರು

ಬದ್ರಿಯಾ ಜುಮಾ ಮಸೀದಿ ಗುತ್ತಿಗಾರು ಧಾರ್ಮಿಕ ಶ್ರದೆ ಯಿಂದ ಸಂಭ್ರಮದ ಈದುಲ್ ಫಿತ್ರ್ ಹಬ್ಬ ಆಚರಿಸಲಾಯಿತು ಖತೀಬರಾದ ಸುಲೈಮಾನ್ ಸ ಅದಿ ಈದ್ ನಮಾಝ್ ಗೆ ನೇತೃತ್ವವಹಿಸಿ ಈದ್ ಸಂದೇಶ ನೀಡಿದರು ಮಾದಕ ವಸ್ತುಗಳ ವ್ಯಸನ ಬಗ್ಗೆ ಜಾಗೃತಿ ಮೂಡಿಸಿದರು ಕೇಶ ವಿನ್ಯಾಸ,ವಸ್ತ್ರಧಾರಣೆ ಧಾರ್ಮಿಕ ಚೌಕಟ್ಟು ನಲ್ಲಿ ಇರಬೇಕು ಅದು ಉತ್ತಮ,ಎಲ್ಲರೂ ಪ್ರೀತಿ ಸ್ನೇಹ ಸಹ ಬಾಳ್ವೆಯಿಂದ ಕೂಡಿ ಒಂದಾಗಿ ಸಾಮರಸ್ಯ ಜೀವನ ಒಂದಾಗಿ ಕೂಡಿ ಬಾಳೋಣ ಎಂದು ಸಂದೇಶ ಸಾರಿದರು ಜಮಾಅತ್ ಅದ್ಯಕ್ಷರಾದ ಹಾಜಿ ಅಬ್ದುಲ್ ಖಾದರ್ ಒಳಲಂಬೆ ಊರಿನ ಜಮಾಅತಿನ ಸರ್ವರೂ ಭಾಗಿಯಾಗಿದ್ದರು.

ತ್ಯಾಗ ಬಲಿದಾನ ದ ಹಬ್ಬವಾದ ಇದುಲ್ ಪಿತರ್ ಹಬ್ಬವನ್ನು ನಿಂತಿಕಲ್ಲು ಬದ್ರಿಯಾ ಜುಮಾ ಮಸೀದಿಯಲ್ಲಿ ವಿಜೃಂಭಣೆ ಯಿಂದ ಆಚರಿಸಲಾಯಿತು.
ಜಮಾತ್ ಖತೀಬ್ ಜಾಪರ್ ಸಹದಿ ಯವರು ಖುತುಬಾ ಕ್ಕೆ ನೇತೃತ್ವ ನೀಡಿ ಈದ್ ಸಂದೇಶ ನೀಡಿ ದುಶ್ಚಟಗಳಿಂದ ದೂರವಿದ್ದು ವ್ಯಸನ ಮುಕ್ತ ಸಮಾಜ ನಿರ್ಮಿಸಲು ಕರೆಯಿತ್ತರು. ಮುಹದ್ದೀನ್ ಮುಸ್ತಫಾ ಜುಹುರಿ, ಜಮಾತ್ ಪದಾದಿಕಾರಿಗಳು. ಸದಸ್ಯರು ವಿದ್ಯಾರ್ಥಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

ಪೇರಡ್ಕ ಗೂನಡ್ಕ ಸಂಭ್ರಮದಲ್ಲಿ ಆಚರಿಸಿದ ಈದುಲ್ ಫಿತ್ರ್: ಇತಿಹಾಸ ಪ್ರಸಿದ್ದ ಅತಿ ಪುರಾಣ ಪೇರಡ್ಕ ಗೂನಡ್ಕ ಮೋಹಿಯದ್ದಿನ್ ಜುಮ ಮಸ್ಜಿದ್ ಖತೀಬ್ ಉಸ್ತಾದರಾದ ನಹೀಮ್ ಫೈಜಿ ಅಲ್ ಮಹಬರಿ ಈದ್ ಸಂದೇಶ ನೀಡಿ ಕೋಮು ಸೌಹಾರ್ದತೆ,ಕುಟುಂಬ ಜೀವನ,ರಂಜಾನ್ ಪಾವಿತ್ರತೆ ಬಗ್ಗೆ ತಿಳಿಸಿ ಪಲೇಸ್ಟಿಯನಲ್ಲಿ ಮಕ್ಕಳು ಮಹಿಳೆಯರು ಹಿರಿಯರು ಸಹಿತ ಅಲ್ಲಿಯ ಜನತೆ ಅನುಭವಿಸುತ್ತಿರುವ ಕಷ್ಟವನ್ನು ನೆನೆದು ಕಣ್ಣು ನೀರುಹಾಕಿ ಅಲ್ಲಿಯ ರಂಜಾನ್ ಮತ್ತು ಹಬ್ಬದ ಆಚರಣೆಯ ಕಷ್ಟದ ಬಗ್ಗೆ ವಿವರಿಸಿ ಶಾಂತಿಗೆ ಪ್ರಾರ್ಥಿಸಿದರು. ನಮಾಜ್ ಬಳಿಕ ಎಲ್ಲರು ಪರಸ್ಪರ ಶುಭಾಶಯ ಹಂಚಿದರು, ನಂತರ ಮರಣ ಹೊಂದಿದವರಿಗೆ ಖಬರ್ ಸ್ಥಾನದಲ್ಲಿ ಝಿಯಾರತ್ ಮತ್ತು ಪೇರಡ್ಕ ವಲಿಯುಲ್ಲಾಹಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನಡೆಸಿದರು ಈ ಸಂದರ್ಭದಲ್ಲಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್, ಪದಾಧಿಕಾರಿಗಳದ ಟಿ ಬಿ ಹನೀಫ್, ಪಿ ಕೆ ಉಮ್ಮರ್ ಗೂನಡ್ಕ,ತೆಕ್ಕಿಲ್ ಮೊಹಮದ್ ಕುಂಞಿ ಪೇರಡ್ಕ, ಪಾಂಡಿ ಉಸ್ಮಾನ್, ಸಿನಾನ್ ದರ್ಕಾಸ್, ಡಿ ಎ ಮೊಯಿದು ದರ್ಕಾಸ್ ಗೂನಡ್ಕ, ಭಾತಿಶ ತೆಕ್ಕಿಲ್ ಸೆಟ್ಟಿಯಡ್ಕ,
ಎಂ ಆರ್ ಡಿ ಎ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ,ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಮುನೀರ್ ಧಾರಿಮಿ, ಅಕ್ಬರ್ ಕರಾವಳಿ,ಪಾಂಡಿ ಅಬ್ಬಾಸ್ ನಿವೃತ್ತ ಅರಣ್ಯ ಅಧಿಕಾರಿ ಯೂಸುಫ್, ತಾಲೂಕು ಕಚೇರಿ ಸಿಬ್ಬಂದಿ ರಜಾಕ್ ಮೊದಲಾದವರು ಭಾಗವಹಿಸಿದರು.

ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು. ಮಸೀದಿಯ ಖತಿಬರಾದ ಅಶ್ರಫ್ ಮುಸ್ಲಿಯಾರ್ ರವರು ಖುತುಬಾ ನೆರವೇರಿಸಿ ಈದ್ ಸಂದೇಶವನ್ನು ನೀಡಿ ‘ಹಬ್ಬ ಸಂಭ್ರಮದ ಹೆಸರಿನಲ್ಲಿ ಒಂದು ಕ್ಷಣ ಆಚರಿಸುವ ಅನಿಸ್ಲಾಮಿಕ ಕಾರ್ಯಕ್ರಮಗಳು ನಮ್ಮ ಶಾಶ್ವತ ಇಹ ಪರ ನಷ್ಟಕ್ಕೆ ಹೇತು ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದರು ಸುಮಾರು ಎಂಟು ವರ್ಷಗಳಿಂದ ಮಸೀದಿಯ ಖತಿಬರಾಗಿ ಸೇವೆಗೈದ ಆಶ್ರಫ್ ಮುಸ್ಲಿಯಾರ್ ರವರನ್ನು ಜಮಾಅತ್ ವತಿಯಿಂದ ಬೀಳ್ಕೊಟ್ಟು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಮಸೀದಿಯ ಮುಅಲ್ಲಿಮ್ ರಹೂಫ್ ಆಝ್ಹರಿ ಜಮಾಅತ್ ಅಧ್ಯಕ್ಷರಾದ ಮಹಮ್ಮದ್ ಆಲಿ ಪೆರಾಜೆ ಉಪಾಧ್ಯಕ್ಷರಾದ ಅಬ್ದುಲ್ ಕರೀಂ ಬಿ ಎಂ,ಪ್ರಧಾನ ಕಾರ್ಯದರ್ಶಿಯಾದ ಅಬ್ದುಲ್ ಖಾದರ್ ಅಕ್ಕರೆ ಹನೀಫ್ ಹಾಜಿ ಕೆ ಎಂ, ಮಹಮ್ಮದ್ ಮುಸ್ಲಿಯಾರ್ ಎಲಿಮಲೆ, ಸಿದ್ದಿಕ್ ಹುದವಿ ಮಾಡನ್ನೂರ್, ಹಾಗೂ ಆಡಳಿತ ಸಮಿತಿಯ ಸದಸ್ಯರು ಮತ್ತು ಜಮಾಅತಿನ ಸರ್ವರೂ ಪಾಲ್ಗೊಂಡರು.