ಓಡಬೈ: ಇಲ್ಲಿನ ಗುಂಡ್ಯಡ್ಕ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಾಟಾ 407 ಮಿನಿ ಲಾರಿಯೊಂದು ರಸ್ತೆ ಬದಿಯ ಮೋರಿಗೆ ಬಿದ್ದಿದೆ. ಬೆಳ್ತಂಗಡಿಯಿಂದ ಕುಶಾಲನಗರ ಕಡೆ ಸಂಚರಿಸಿಸುತ್ತಿದ್ದ ಈ ವಾಹನ ಅಪಘಾತವಾಗಿದೆ. ಈಗಾಗಲೇ ತುಂತುರು ಮಳೆಯಾಗಿದ್ದು 50 ಮೀಟರ್ ಹಿಂದಿನಿಂದಲೇ ವಾಹನ ನಿಯಂತ್ರಣ ಕಳೆದುಕೊಂಡಿದ್ದಾಗಿ ತಿಳಿದು ಬಂದಿದೆ. ವಾಹನದಲ್ಲಿ ಇಬ್ನರು ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ‌ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *