ಇಂದು ಬೆಳಗ್ಗಿನ ಜಾವ ಕಾಡಾನೆಗಳು ಕೃಷಿ ಭೂಮಿಗೆ ದಾಳಿ ನಡೆಸಿ ತೆಂಗು, ಅಡಿಕೆ ಮತ್ತು ಬಾಳೆ ಗಿಡಗಳನ್ನು ನಾಶಪಡಿಸಿದ ಘಟನೆ ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ ನಡೆದಿದೆ. ಅರಂಬೂರು ಅಬ್ದುಲ್ ರಹೆಮಾನ್ ರವರ ತೋಟಕ್ಕೆ ನುಗ್ಗಿದ ಆನೆಯ ಗುಂಪು ಕೃಷಿ ನಾಶ ಮಾಡಿದ್ದಲ್ಲದೆ ನೀರಾವರಿಯ ಪೈಪುಗಳನ್ನು ಒಡೆದು ಹಾಕಿ ನಷ್ಟ ಉಂಟು ಮಾಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


