ಮಾದಕ ಇದುವೇ ನಮ್ಮ ಜೀವನಕ್ಕೆ ಪಾಷಾಣ
ಇದರಿಂದ ವ್ಯಹಿಸಲಾಗುವುದು ಅಧಿಕ ಹಣ
ಮುರಿದು ಬೀಳಬಹುದು ಸುಖ ಸಂಸಾರದ ಪಯಣ
ಆಗುವುದು ಮುಂದೆ ಸಂತಾನ ಹರಣ
ಉತ್ತಮ ಹವ್ಯಾಸಗಳು ಬಾಳಿಗೆ
ಹೂರಣ ಮಾದಕ ಬಿಟ್ಟರೆ ಆಗುವುದು ಬಾಳು ಹೊಂಗಿರಣ
ನಿಶಕ್ತಿ,ನಿತ್ರಾಣ ಪದೇ ಪದೇ ಅನಾರೋಗ್ಯಕ್ಕೆ ಆಹ್ವಾನ
ಕೊನೆಗೊಮ್ಮೆ ಮೃತ್ಯುವಿಗೆ ಆಹ್ವಾನ
ಯುವಶಕ್ತಿ, ದೇಶಭಕ್ತಿ ಚಿಮ್ಮಬೇಕು ಈ ಧರೆಯಲ್ಲಿ
ಮಾದಕ ವ್ಯಸನದಿಂದ ಮಣ್ಣು ಮುಕ್ಕಿಸಬೇಡಿ
ರಸ ಖುಷಿಗಳು ಉದಯಿಸಲಿ ಈ ಇಳೆಯಲ್ಲಿ
ಉತ್ತಮ ಆರೋಗ್ಯವಂತರಾಗಿ ನಲಿಯಿರಿ ಜೀವನವಿಡೀ…
✍️ಓಬಳೇಶ,
ಸಹಶಿಕ್ಷಕರು,ಸರಕಾರಿ.ಉನ್ನತ.ಹಿರಿಯ.ಪ್ರಾಥಮಿಕ.ಶಾಲೆ.
ಸವಣೂರು