ಯಾವುದೇ ಕಂಪನಿಯಾಗಿರಲಿ ತನ್ನ ಬೆಳವಣಿಗೆಗೆ ಉದ್ಯೋಗಿಗಳ ಶ್ರಮ ತುಂಬಾ ಇರುತ್ತದೆ. ವರ್ಷದುದ್ದಕ್ಕೂ ಕಂಪನಿಗಾಗಿ ದುಡಿಯುವವರಿಗೆ ಸಂಬಳ ಬಿಟ್ಟು ಬೇರೇನೂ ಸಿಗುವುದಿಲ್ಲ. ಆದರೆ ಕೆಲವೊಂದೆಡೆ ಮನಸುಳ್ಳ ಮಾಲೀಕರು ತಮ್ಮ ಉದ್ಯೋಗಿಗಳನ್ನು ಮನೆ-ಮಂದಿಯಂತೆ ಕಾಣುತ್ತಾರೆ.
ಅವರ ಲಾಭದಲ್ಲಿ ಒಂದಷ್ಟು ಹಣವನ್ನು ಉದ್ಯೋಗಿಗಳಿಗಾಗಿ ವ್ಯಯಿಸುತ್ತಾರೆ. ಇಂತಹ ಮಾಲೀಕರಿಗೆ ನೌಕರರು ಕೂಡ ನಿಷ್ಠಾವಂತರಾಗಿ ಕೆಲಸ ಮಾಡುತ್ತಾರೆ. ಇತ್ತೀಚೆಗೆ ಇಂತಹ ಮಾಲೀಕರೊಬ್ಬರು ಬೆಳಕಿಗೆ ಬಂದಿದ್ದಾರೆ. ಗುಜರಾತ್‌ನ ಆಭರಣ ಅಂಗಡಿ ಮಾಲೀಕರೊಬ್ಬರು ತಮ್ಮ ನಿಷ್ಠಾವಂತ ಉದ್ಯೋಗಿಗಳಿಗೆ ಐಷಾರಾಮಿ ಕಾರುಗಳು, ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ದೊಡ್ಡ ದೊಡ್ಡ ಕಂಪನಿಗಳ ಸಿಇಒಗಳು ಮತ್ತು ಉದ್ಯಮಿಗಳು ಸಾಮಾನ್ಯವಾಗಿ ದುಬಾರಿ ಕಾರುಗಳು, ಐಷಾರಾಮಿ ಮನೆಗಳೊಂದಿಗೆ ತಮ್ಮ ಬೆಳವಣಿಗೆಯನ್ನು ಮಾತ್ರ ನೋಡಿಕೊಳ್ಳುತ್ತಾರೆ. ಆದರೆ ಕಷ್ಟಪಟ್ಟು ದುಡಿಯುವ ಉದ್ಯೋಗಿಗಳ ಬಗ್ಗೆ ಅವರಿಗೆ ಕಾಳಜಿ ಇರುವುದಿಲ್ಲ. ಇದನ್ನು ತಪ್ಪು ಎಂದು ಭಾವಿಸಿರುವ ಆಭರಣ ಅಂಗಡಿ ಮಾಲೀಕ ತನ್ನ ಉದ್ಯೋಗಿಗಳಿಲ್ಲದೆ ತಾನು ಬೆಳೆಯಲು ಸಾಧ್ಯವಿಲ್ಲ ಎಂಬುದನ್ನು ಮನಗಂಡಿದ್ದಾರೆ.
ನಿಷ್ಠಾವಂತ ಉದ್ಯೋಗಿಗಳಿಗೆ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿ ಉದ್ಯೋಗಿಗಳ ಮನಗೆದ್ದಿದ್ದಾರೆ. ಗುಜರಾತ್‌ನ ಕಾಬ್ರಾ ಜ್ಯುವೆಲ್ಸ್ ಸಂಸ್ಥಾಪಕ ಕೈಲಾಶ್ ಕಾಬ್ರಾ, 200 ಕೋಟಿ ರೂ. ಆದಾಯದ ಮೈಲಿಗಲ್ಲನ್ನು ತಲುಪುವ ಗುರಿಯನ್ನು ಹೊಂದಿದ್ದರು. ಇದನ್ನು ಸಾಧಿಸಲು ಶ್ರಮಿಸಿರುವ 12 ಹಿರಿಯ ಉದ್ಯೋಗಿಗಳಿಗೆ ಹೊಸ ವಾಹನಗಳನ್ನು ಬಹುಮಾನವಾಗಿ ನೀಡಿದ್ದಾರೆ.
ಆಯ್ಕೆಯಾದ ಉದ್ಯೋಗಿಗಳಿಗೆ ಹ್ಯುಂಡೈ ಐ 10, ಹ್ಯುಂಡೈ ಎಕ್ಸೆಂಟ್, ದುಬಾರಿ ಮಹೀಂದ್ರಾ ಎಕ್ಸ್‌ಯುವಿ 700, ಟೊಯೊಟಾ ಇನ್ನೋವಾ ಮತ್ತು ಮಾರುತಿ ಎರ್ಟಿಗಾ ಕಾರುಗಳು ಸೇರಿದಂತೆ ದುಬಾರಿ ಉಡುಗೊರೆಗಳನ್ನು ನೀಡಲಾಯಿತು. ಇನ್ನೂ ಕೆಲವರಿಗೆ ಕುಟುಂಬದೊಂದಿಗೆ ರಜಾದಿನದ ಪ್ಯಾಕೇಜ್‌ಗಳು, ಚಿನ್ನ ಮತ್ತು ಬೆಳ್ಳಿ ನಾಣ್ಯಗಳು, ದ್ವಿಚಕ್ರ ವಾಹನಗಳು, ಮೊಬೈಲ್ ಫೋನ್‌ಗಳನ್ನು ನೀಡಲಾಗಿದೆ.
ಕೈಲಾಶ್ ಕಾಬ್ರಾ ತಮ್ಮ 21ನೇ ವಯಸ್ಸಿನಲ್ಲಿ ತಮ್ಮ ಉದ್ಯಮವನ್ನು ಪ್ರಾರಂಭಿಸಿದರು, ಆಗ ಕೇವಲ 12 ಉದ್ಯೋಗಿಗಳನ್ನು ಹೊಂದಿದ್ದರು. ಅಂದು 2 ಕೋಟಿ ರೂ.ನಿಂದ ಟರ್ನ್‌ಓವರ್ ಆಗುತ್ತದ್ದ ಉದ್ಯಮವು ಇಂದು ನಾವು 2024-25ರ ಆರ್ಥಿಕ ವರ್ಷದಲ್ಲಿ ಮಾರಾಟದಲ್ಲಿ 200 ಕೋಟಿ ರೂ. ಟರ್ನ್‌ಓವರ್ ದಾಟಿದೆ. ಜೊತೆಗೆ ಒಟ್ಟು 140 ಸದಸ್ಯರೊಂದಿಗೆ ಉದ್ಯಮ ಬೆಳೆದಿದೆ.
ತಂಡದ ಸಮರ್ಪಣೆಯಿಲ್ಲದೆ ಈ ಪ್ರಯಾಣವು ಸಾಧ್ಯವಾಗುತ್ತಿರಲಿಲ್ಲ. ಇದೆಲ್ಲಾ ಉದ್ಯೋಗಿಗಳ ಕಠಿಣ ಶ್ರಮವಾಗಿದೆ, ಇದಕ್ಕೆ ನಾನು ಕೃತಜ್ಞನಾಗಿರುತ್ತೇನೆ. ನನ್ನ ಲಾಭದಲ್ಲಿ ಉದ್ಯೋಗಿಗಳಿಗೂ ಒಂದಷ್ಟು ಉಡುಗೊರೆಗಳನ್ನು ನೀಡುವುದರಲ್ಲಿ ತಪ್ಪಿಲ್ಲ. ಅವರಿಂದಲೇ ಇಂದು ನನ್ನ ಉದ್ಯಮ ಬೆಳೆಯುತ್ತಿದೆ. ಮುಂದೆಯೂ ಬೆಳೆಯುವ ವಿಶ್ವಾಸವಿದೆ. ನನ್ನ ಉದ್ಯೋಗಿಗಳಿಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಮಾಲೀಕ ಹೇಳಿದ್ದಾರೆ.
ಕಂಪನಿಗಳು ಪ್ರತಿವರ್ಷ ಭಾರಿ ಆದಾಯ ಮತ್ತು ಲಾಭದ ಅಂಕಿಅಂಶಗಳನ್ನು ಹಂಚಿಕೊಳ್ಳುವುದನ್ನು ನಾವು ಆಗಾಗ್ಗೆ ನೋಡುತ್ತೇವೆ. ಹೆಚ್ಚಿನ ಕಾರ್ಮಿಕರು ತಿಂಗಳೆಲ್ಲ ಕೆಲಸ ಮಾಡಿದ ನಂತರ ಪಡೆಯುವ ಸಂಬಳದಿಂದ ತೃಪ್ತರಾಗುವುದಿಲ್ಲ. ಅವರಿಗೆ ಆಗಾಗ್ಗೆ ಸಂಬಳಕ್ಕಿಂತ ಹೆಚ್ಚಿನದು ಸಿಕ್ಕಾಗ ಮಾಲೀಕರಿಗೂ ಏನಾದರೂ ಹೆಚ್ಚುವರಿಯಾಗಿ ಮಾಡಲು ಪ್ರೇರೇಪಿಸುತ್ತದೆ. ಕೈಲಾಶ್ ಕಾಬ್ರಾ ಕೂಡ ಉದ್ಯೋಗಿಗಳನ್ನು ಉತ್ತಮವಾಗಿ ನೋಡಿಕೊಂಡಿರುವ ಕಾರಣ ಇಂದು ಅವರ ಉದ್ಯಮ ಬೆಳೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.