ಕೊಯನಾಡು:- ಸುನ್ನಿ ಮುಸ್ಲಿಂ ಜುಮಾ ಮಸೀದಿ ಅಧೀನದಲ್ಲಿರುವ ಸುಬುಲು ಸ್ಸಲಾಂ ಮದ್ರಸದಲ್ಲಿ ಏಪ್ರಿಲ್ 9 ರಂದು ಬುಧವಾರ ಬೆಳಗ್ಗೆ 7 ಗಂಟೆಗೆ ಮದ್ರಸ ಸಭಾಂಗಣದಲ್ಲಿ ಆಕ್ಷರಲೋಕಕ್ಕೆ ಮೊದಲ ಹೆಜ್ಜೆ ಮದ್ರಸ ವಿದ್ಯಾರಂಭ ಫತ್ಹೇ ಮುಬಾರಕ್ ಕಾರ್ಯಕ್ರಮ ನಡೆಯಿತು.
ಸದರ್ ಮುಅಲ್ಲಿಂ ನೌಶಾದ್ ಫಾಳಿಲಿ ಸರ್ವರನ್ನು ಸ್ವಾಗತಿಸಿದರು, ಮಸೀದಿ ಖತೀಬ್ ಮಹಮ್ಮದ್ ಸಖಾಫಿ ಅಲ್ ಹಿಕಮಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಕ್ಷರಲೋಕಕ್ಕೆ ಮೊದಲ ಹೆಜ್ಜೆ ಮದ್ರಸ ವಿದ್ಯಾರಂಭ ಕಾರ್ಯಕ್ರಮದ ಬಗ್ಗೆ ಸವಿಸ್ತಾರವಾಗಿ ವಿಧ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮಾಹಿತಿ ನೀಡಿದರು, ಮಸೀದಿ ಅಧ್ಯಕ್ಷ ಹಾಜಿ ಎಸ್ ಮೊಯಿದಿನ್ ಕುಂಞಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು, ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷ ಹನೀಫ್ ಎಸ್ ಪಿ ಮಾತನಾಡಿ ಮದ್ರಸ ಶಿಕ್ಷಣದಿಂದ ವಿಧ್ಯಾರ್ಥಿಗಳು ಶಿಸ್ತು, ದಕ್ಷತೆ ಪ್ರಾಮಾಣಿಕತೆ ಪ್ರಬುದ್ಧತೆ ಹೊಂದುತ್ತಾರೆ ಎಂದರು, ವೇದಿಕೆಯಲ್ಲಿ ಮಾಜಿ ಅಧ್ಯಕ್ಷರಾದ ಹಾಜಿ ಅಲವಿಕುಟ್ಟಿ, ಎಸ್ ಎ ಅಬ್ದುಲ್ ರಝಾಕ್, ಉಪಾಧ್ಯಕ್ಷ ಉಸ್ಮಾನ್ ಎಂ ಹೆಚ್, ಪ್ರಧಾನ ಕಾರ್ಯದರ್ಶಿ ಮುನೀರ್ ಪಿ ಎಂ, ಸದಸ್ಯರಾದ ಎಸ್ ಕೆ ಅಬ್ದುಲ್ ರಹಿಮಾನ್, ಕುಂಞಿಲಿ, ಹಾಗೂ ವಿಧ್ಯಾರ್ಥಿಗಳು, ಪೋಷಕರು, ಸರ್ವ ಜಮಾಅತ್ ಸದಸ್ಯರು ಉಪಸ್ಥಿತರಿದ್ದರು, ನೂತನ ವಿಧ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಕೂಡ ನಡೆಯಿತು, ಮೂರು ಸ್ವಲಾತ್ ನೋಂದಿಗೆ ಸಿಹಿ ತಿಂಡಿ ಹಂಚುವ ಮೂಲಕ ಕಾರ್ಯಕ್ರಮ ಕೊನೆ ಗೊಳಿಸಲಾಯಿತು.

