ಕರ್ನಾಟಕ ಸರಕಾರದ ಇಂಧನ ಇಲಾಖೆಯ ಅಡಿಯಲ್ಲಿ ಬರುವ ಮಂಗಳೂರು ವಿದ್ಯುತ್ ಶಕ್ತಿ ಸರಬರಾಜು ಕಂಪನಿ ನಿಯಮಿತ ಇದರ ಅಡಿಯ ಸುಳ್ಯ ವಿಧಾನಸಭಾ ಕ್ಷೇತ್ರದ ಮೆಸ್ಕಾಂ ಶಾಖೆಗೆ ಸಲಹಾ ಸಮಿತಿಯ ಸದಸ್ಯರುಗಳನ್ನಾಗಿ ಸರಕಾರ ನೇಮಿಸಿ ಆದೇಶಿಸಿದೆ. ಸುಳ್ಯ ಮೆಸ್ಕಾಂ ನ ಜಾಲ್ಲೂರು ಶಾಖೆಗೆ ಗ್ರಾಹಕ ಪ್ರತಿನಿಧಿ ಎನ್.ಎಂ. ಮಹಮ್ಮದ್ ಬಶೀರ್ ಶಾಂತಿನಗರ ಇವರನ್ನು ನೇಮಕ ಮಾಡಲಾಗಿದೆ. ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪಿ ಸಿ ಜಯರಾಮ, ಹಾಗೂ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಇವರ ಶಿಫಾರಸ್ಸಿನ ಮೇರೆಗೆ ಕರ್ನಾಟಕ ಘನ ಸರಕಾರದ ಇಂಧನ ಸಚಿವರಾದ ಕೆ ಜೆ ಜಾರ್ಜ್ ಇವರು ಎಸ್ಎಂ ಮಹಮ್ಮದ್ ಬಶೀರ್ ಆರ್ ಬಿ ರವರನ್ನು ಸುಳ್ಯ ಮೆಸ್ಕಾಂ ಇಲಾಖೆ ನಾಮ ನಿರ್ದೇಶನ ಸದಸ್ಯರನ್ನಾಗಿ ಆಯ್ಕೆ ಮಾಡಿರುತ್ತಾರೆ. ..