ಸುಳ್ಯ: ಏ‌.15: ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಸುಳ್ಯ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಮಹಮ್ಮದ್ ಲಾಝಿಮ್ ಇವರಿಗೆ ಕೆ.ಎ 21 ಸುಳ್ಯ ವಾಟ್ಸಪ್ ಗ್ರೂಪ್ ವತಿಯಿಂದ ಸನ್ಮಾನಿಸಲಾಯಿತು. ಸುಳ್ಯ ಕೆ.ವಿ.ಜಿ‌ ಅಮರ ಜ್ಯೋತಿ ಪಿ.ಯು ಕಾಲೇಜು ವಿಧ್ಯಾರ್ಥಿ ಹಾಗೂ ಲತೀಫ್ (ಶಿಲ್ಪ) ಮತ್ತು ಝುಬೈದಾ ದಂಪತಿಗಳ ಪುತ್ರನಾದ ಮೊಹಮ್ಮದ್ ಲಾಝೀಮ್ 588 ಅಂಕ ಗಳಿಸಿ ಸುಳ್ಯ ತಾಲ್ಲೂಕಿಗೆ ವಾಣಿಜ್ಯ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ಇವರಿಗೆ ಸಾಮಾಜಿಕ, ಧಾರ್ಮಿಕ , ಶೈಕ್ಷಣಿಕ , ಮತ್ತು ಸಮುದಾಯ ಸೇವಾ ರಂಗದಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಸಮಾನ ಮನಸ್ಕ ಗೆಳೆಯರ ವಾಟ್ಸಪ್ ಗ್ರೂಪ್ (ಕೆ.ಎ 21 ಸುಳ್ಯ ) ಇದರ ವತಿಯಿಂದ ಸದಸ್ಯರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು. ಈ ಸಂಧರ್ಭದಲ್ಲಿ ಕೆ.ಎ 21 ಸುಳ್ಯ ವಾಟ್ಸಪ್ ಗ್ರೂಪ್ ನಿರ್ವಾಹಕ (ಅಡ್ಮಿನ್) ಫೈಝಲ್ ಕಟ್ಟೆಕ್ಕಾರ್, ಶಮೀರ್ ಮೊಬೈಲ್ ಹಾರ್ಟ್, ಸಿದ್ದೀಕ್, ಇರ್ಷಾದ್, ತಸ್ರೀಫ್, ಭಾಝಿಮ್, ಅತ್ತಾವುಲ್ಲ ಕೆ.ಎಂ, ಸಮದ್ ಕಳ್ಳಪಳ್ಳಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *