ಉರ್ದು ಭಾಷೆ ಭಾರತಕ್ಕೆ ಪರಕೀಯವಲ್ಲ ಎಂದು ಅಭಿಪ್ರಾಯ ಪಟ್ಟಿದೆ. ಉರ್ದು ಭಾಷೆ ಅನ್ಯವಾದುದು ಎಂಬ ಪೂರ್ವಾಗ್ರಹ ಪೀಡಿತ ಭಾವನೆಯಿಂದ ಹೊರಬರಬೇಕು ಎಂದು ಕೋರ್ಟ್ ತಾಕೀತು ಮಾಡಿದೆ. ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಪಾತೂರ್ ಪಟ್ಟಣದಲ್ಲಿರುವ ಪುರಸಭೆಯ ಸೈನ್‌ಬೋರ್ಡ್‌ನಲ್ಲಿ ಉರ್ದು ಬಳಕೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.ನಮ್ಮ ಪರಿಕಲ್ಪನೆಯು ಸ್ಪಷ್ಟವಾಗಿರಬೇಕಿದೆ. ಭಾಷೆ ಒಂದು ಧರ್ಮವಲ್ಲ. ಭಾಷೆ ಯಾವುದೇ ಧರ್ಮವನ್ನು ಪ್ರತಿನಿಧಿಸುವುದೂ ಇಲ್ಲ. ಭಾಷೆಯು ಒಂದು ಸಮುದಾಯ, ಒಂದು ಪ್ರಾಂತ್ಯ ಹಾಗೂ ಜನರಿಗೆ ಸೇರಿ ಸೇರಿದ್ದಾಗಿದೆಯೇ ಹೊರತು ಧರ್ಮಕ್ಕಲ್ಲ. ಭಾಷೆಯು ವಿಭಿನ್ನ ದೃಷ್ಟಿಕೋನಗಳು ಹಾಗೂ ಶ್ರದ್ಧೆಗಳನ್ನು ಹೊಂದಿರುವ ಜನರನ್ನು ಪರಸ್ಪರರ ಗ್ರಹಿಕೆಯ ವಿನಿಮಯದ ಮೂಲಕ ಸನಿಹಕ್ಕೆ ತರುವ ಒಂದು ಮಾಧ್ಯಮವಾಗಿದೆ ಎಂದು ಕೋರ್ಟ್ ಅಭಿಪ್ರಾಯಿಸಿದೆ.


