ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ತೆರಳಲಿರುವ ಹುದಾ ಕೋರ್ಸ್ ಸದಸ್ಯರೂ, ಸಂಟ್ಯಾರು ಚಾರಿಟೇಬಲ್ ಟ್ರಸ್ಟ್ ಕಲ್ಲುಗುಂಡಿ ಇದರ ಅಧ್ಯಕ್ಷರೂ ಆದ ಅಶ್ರಫ್ ಹೆಚ್ ಎ ಬಾಲಂಬಿ, ಪತ್ನಿ ಝರೀನಾ, ಮಗ ಅಫಾನ್ ರವರಿಗೆ ಸುನ್ನೀ ಸೆಂಟರ್ ಕಲ್ಲುಗುಂಡಿ ಅಧೀನದಲ್ಲಿ ಕಾರ್ಯಾಚರಿಸುವ ಹುದಾ ಕೋರ್ಸ್ ಇದರ ಸಹಪಾಠಿಗಳ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಜಲೀಲ್ ಸಖಾಫಿ ದೇವರಕೊಲ್ಲಿ, ಫೈಝಲ್ ಝುಹ್ರಿ ಕಲ್ಲುಗುಂಡಿ, ಹಂಝ ಕೊಯನಾಡು, ಆಶಿಕ್ ಕೆ ಹೆಚ್, ಜಾಬಿರ್ ಎಂ ಬಿ, ಹಾರಿಸ್ ಗೂನಡ್ಕ, ಅಬ್ದುಲ್ ಖಾದರ್, ಸ್ವಾದಿಕ್ ಮಾಸ್ಟರ್ ಕಲ್ಲುಗುಂಡಿ, ಹಸೈನಾರ್ ಚಟ್ಟೆಕ್ಕಲ್ಲು, ಮುಸ್ತಫಾ ದೇವರಕೊಲ್ಲಿ, ರಿಝ್ವಾನ್ ದೇವರಕೊಲ್ಲಿ ಸಹಿತವಿರುವ ಹುದಾ ಕೋರ್ಸ್ ಸದಸ್ಯರು ಉಪಸ್ಥಿತರಿದ್ದರು.