ಬದ್ರಿಯಾ ಜುಮಾ ಮಸೀದಿ ಅರಂತೋಡು ಇದರ ದಿಕ್ರ್ ಸ್ವಲಾತ್ ಸಮಿತಿಯ ವಾರ್ಷಿಕ ಮಹಾಸಭೆಯು ಅಧ್ಯಕ್ಷ ಕೆ.ಎಂ ಇಬ್ರಾಹಿಂ ಕುಕ್ಕುಂಬಳರವರ ಅಧ್ಯಕ್ಷತೆಯಲ್ಲಿ ಮೇ. 04 ರಂದು ನಡೆಯಿತು. ಖತೀಬರಾದ ಇಸ್ಮಾಯಿಲ್ ಫೈಝಿ ಗಟ್ಟಮನೆ ದುವಾ ನೆರವೇರಿಸಿದರು. ಕಾರ್ಯದರ್ಶಿ ಕೆ.ಯು ಸಂಶುದ್ಧೀನ್ ಸ್ವಾಗತಿಸಿ ಲೆಕ್ಕ ಪತ್ರವನ್ನು ಮಂಡಿಸಿದರು. ಸಭೆಯಲ್ಲಿ 2025 – 26 ನೇ ಸಾಲಿಗೆ ನೂತನ ಪಧಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧಕ್ಷರಾಗಿ ಸಯ್ಯದ್ ಎನ್.ಪಿ.ಎಂ ಝೈನುಲ್ ಆಬಿದೀನ್ ತಂಙಳ್, ಅಧ್ಯಕ್ಷರಾಗಿ ಕೆ.ಎಂ ಇಬ್ರಾಹಿಂ ಕುಕ್ಕುಂಬಳ ಬಿಳಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಯು ಸಂಶುದ್ಧೀನ್, ಕೋಶಾಧಿಕಾರಿಯಾಗಿ ಸಂಶುದ್ಧೀನ್ ಪೆಲ್ತಡ್ಕ, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಫೈಝಿ ಗಟ್ಟಮನೆ, ಸಂಚಾಲಕರಾಗಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಜೊತೆ ಕಾರ್ಯದರ್ಶಿಯಾಗಿ.ಕೆ.ಎಂ ಉಸ್ಮಾನ್ ಹಾಗೂ ನಿರ್ದೇಶಕರಾಗಿ ಹಾಜಿ ಕೆ.ಎಂ ಮಹಮ್ಮದ್, ಎ.ಅಬ್ದುಲ್ಲ ಗುಂಡಿ, ಹಾಜಿ ಎ ಅಬ್ದುಲ್ಲ ಮಾಸ್ತರ್, ಜುಬೈರ್ ಎಸ್.ಇ, ತಾಜುದ್ದೀನ್ ಅರಂತೋಡು, ಹನೀಫ್ ಕುನ್ನಿಲ್, ಸಂಶುದ್ಧೀನ್ ಕ್ಯೂರ್ ಆಯ್ಕೆಯಾದರು.
