ಸುಳ್ಯ ಸಂಪಾಜೆ ಗ್ರಾಮದ ಪೆರಡ್ಕ ಗೂನಡ್ಕ ಮೊಹಿಯದ್ದೀನ್ ಜುಮಾ ಮಸ್ಜಿದ್ ನಲ್ಲಿ ದೇಶದ ಸಾಮರಸ್ಯತೆ ಮತ್ತು ಆರ್ಥಿಕತೆಯನ್ನು ಹಾಳುಗೆಡವಲು ಕಾಶ್ಮೀರದಲ್ಲಿ ಅಮಾಯಕರನ್ನು ಹತ್ಯೆಗೈದ ಉಗ್ರಗಾಮಿಗಳ ಕೇಂದ್ರಗಳ ಮೇಲೆ ಭಾರತೀಯ ಸೈನ್ಯವು ದಾಳಿ ಮಾಡಿ ಸೂಕ್ತ ಪಾಠ ಕಲಿಸಿದ್ದು, ಈ ಸಂದರ್ಭದಲ್ಲಿ ಭಾರತೀಯರಾದ ನಾವೆಲ್ಲರೂ ನಮ್ಮ ಸೈನಿಕರಿಗೆ ನೈತಿಕ ಬೆಂಬಲ ನೀಡಬೇಕಾದ ಅನಿವಾರ್ಯತೆ ಇದೆ ಎಂದು ಇಂದು ಜುಮಾ ನಮಾಝಿನ ಬಳಿಕ ಪೇರಡ್ಕ ಮಸೀದಿಯಲ್ಲಿ ನಡೆದ ವಿಶೇಷ ಪ್ರಾರ್ಥನಾ ಸಭೆಯಲ್ಲಿ ಸ್ಥಳೀಯ ಖತೀಬರಾದ ಅಹ್ಮದ್ ನ‌ಈಂ ಫೈಝಿ ಅಲ್ ಮ‌ಅಬರಿ ಹೇಳಿದರು. ಪ್ರಸ್ತುತ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷಗಳು ನಡೆಯುತ್ತಿದ್ದು, ಭಾರತೀಯರ ಸಂರಕ್ಷಣೆಗಾಗಿ ಶತ್ರುಗಳೊಂದಿಗೆ ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ಭಾರತೀಯ ಸೈನಿಕರ ಯಶಸ್ಸಿಗೆ ವಿಶೇಷ ಪ್ರಾರ್ಥನೆ ನಡೆಸಲಾಯಿತು.

Leave a Reply

Your email address will not be published. Required fields are marked *