ವಿದ್ಯುತ್ ಶಾಕ್ ತಗುಲಿದ ಪರಿಣಾಮ ವ್ಯಕ್ತಿಯೊಬ್ಬರು ದಾರುಣ ಸಾವನ್ನಪ್ಪಿದ ಘಟನೆ ಅರಂತೋಡು ಸಮೀಪದ ಬಿಳಿಯಾರಿನಿಂದ ಇದೀಗ (ಮೇ11) ರಾತ್ರಿ ವರದಿಯಾಗಿದೆ. ಮೃತ ಪಟ್ಟವರು ಪುರುಷೋತ್ತಮ 55 ವರ್ಷ ಎಂದು ತಿಳಿದು ಬಂದಿದೆ. ಆಟೋ ಚಾಲಕರಾಗಿರುವ ಅವರು ಟ್ರಿಪ್ಪರ್ ಚೇಂಜ್ ಮಾಡುವ ಸಂದರ್ಭ ದಲ್ಲಿ ಏಕಾಏಕಿ ವಿದ್ಯುತ್ ಪ್ರವಹಿಸಿ ಸಾವಿಗೀಡಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಅವರನ್ನು ಸುಳ್ಯದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆಸಲಾಯಿತಾದರೂ ಅದು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *