ಸುಳ್ಯ: ವಿಶೇಷ ದಾಖಲೆಯ ಸಾಧನೆಗಾಗಿ ನೀಡಲಾಗುವ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಗೆ ಕೆವಿಜಿ ಫಿಸಿಯೊತೆರಫಿ ವಿದ್ಯಾರ್ಥಿನಿ ಶಹನಾ ಸಿ.ಪಿ ಆಯ್ಕೆಯಾಗಿದ್ದಾರೆ.
ವಿವಿಧ ಕಲಾ ತಂತ್ರಗಳನ್ನು ಬಳಸಿಕೊಂಡು ಮಹಾತ್ಮ ಗಾಂಧಿಯವರ ಅತೀ ಹೆಚ್ಚು ಭಾವಚಿತ್ರಗಳನ್ನು ರಚಿಸಿದ ದಾಖಲೆ ಇವರದ್ದಾಗಿದೆ. ಮಹಾತ್ಮ ಗಾಂಧಿಯವರ 15 ಭಾವಚಿತ್ರಗಳನ್ನು (ಪ್ರತಿಯೊಂದೂ 15 ಸೆಂ.ಮೀ x 10 ಸೆಂ.ಮೀ ಅಳತೆಯ) 15 ವಿಭಿನ್ನ ಚಿತ್ರಕಲೆಯನ್ನು ರಚಿಸಿದ್ದಾರೆ. ಹ್ಯಾಚಿಂಗ್ ಆರ್ಟ್, ಡೂಡಲ್ ಆರ್ಟ್, ಕಾಫಿ ಆರ್ಟ್, ಡಾಟ್ ಆರ್ಟ್, ಸ್ಕ್ರಿಬಲ್ ಆರ್ಟ್ ಹೀಗೆ ಹಲವು ವಿಧದ, ಚಿತ್ರಗಳನ್ನು A6 ಗಾತ್ರದ ಕಾಗದದ ಹಾಳೆಗಳಲ್ಲಿ ರಚಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ತನ್ನದಾಗಿಸಿದ್ದಾರೆ.
