ಒಂದು ಶಿಬಿರ ಊರಿನಲ್ಲಿ ನಡೆಸುವಾಗ 40/50/60/70 ಯುನಿಟ್ ರಕ್ತ ಸಂಗ್ರಹವಾಗುವುದುಂಟು ಅದು ಕೂಡ ಸಂಘಟಕರು ತುಂಬಾ ಕಷ್ಟ ಪಟ್ಟು ಮಾಡುವುದಾದರೆ ಕೆಲವರು ಇಷ್ಟ ಪಟ್ಟು ರಕ್ತದಾನ ಮಾಡುತ್ತಾರೆ. ಇಂತಹ ತಮ್ಮ ಊರಿನಲ್ಲಿ ರಕ್ತದಾನ ಶಿಬಿರ ಮಾಡಲು ಹರಸಾಹಸ ಪಡುವಾಗ ಝಮಾನ್ ಬಾಯ್ಸ್ ಕಲ್ಲಡ್ಕ ಸಂಸ್ಥೆಯು ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಜೊತೆ ಸೇರಿಕೊಂಡು 131 ರಕ್ತದಾನಿಗಳನ್ನು ಮಂಗಳೂರಿಗೆ ಜಾಥಾ ಮೂಲಕ ಕರೆದುಕೊಂಡು ಹೋಗಿ ಜಿಲ್ಲೆಯ ಬೇರೆ ಬೇರೆ ಆಸ್ಪತ್ರೆಯ ರಕ್ತದಾನ ಮಾಡಿಸುವುದು ಎಂದರೆ ಅದು ಒಂದು ಇತಿಹಾಸವೇ ಸರಿ. ಅಲ್ಲದೇ ಕಲ್ಲಡ್ಕ ಊರಿನವರ ಒಗ್ಗಟ್ಟು ಸಮಾನ ಮನಸ್ಸು ಮೆಚ್ಚುವಂಥದ್ದು. 160 ಕ್ಕೂ ಹೆಚ್ಚು ಮಂದಿ ರಕ್ತದಾನ ಜಾಥಾದಲ್ಲಿ ರಕ್ತನಿಧಿಗೆ ಹೋಗಿ 30 ಕ್ಕೂ ಅಧಿಕ ವಾಹನಗಳು ಯಾವುದೇ ಸಂಚಾರಕ್ಕೆ ತಡೆ ಉಂಟು ಮಾಡದೇ ಯಾವುದೇ ಗೊಂದಲ ಮಾಡದೇ ಯಾವುದೇ ಇಲಾಖೆಗೆ ತೊಂದರೆ ಮಾಡದೆ ಒಂದೇ ಒಂದು ಸಾರ್ವಜನಿಕರಿಗೆ ಯಾವುದೇ ರೀತಿಯ ಕಷ್ಟ ಕೊಡದೇ ಬಹಳ ಅಚ್ಚುಕಟ್ಟಾಗಿ ಸುಮಾರು 30 ಕಿ.ಮೀ “ರಕ್ತದಾನ ಜಾಥಾ ಇದು ಜೀವದಾನಿಗಳ ಸಂಗಮ” ಎಂಬ ಧ್ಯೇಯ ವಾಕ್ಯವನ್ನು ಎತ್ತಿ ಹಿಡಿದುಕೊಂಡು ರಕ್ತದಾನ ಮಾಡುವುದರೊಂದಿಗೆ ಜೀವದಾನ ಮಾಡಿ ಗಡಿ ಕಾಯುವ ಸೈನಿಕರಂತೆ ರಕ್ತದಾನ ಮಾಡಿದ ಯೋಧರು ಝಮಾನ್ ಬಾಯ್ಸ್ ಕಲ್ಲಡ್ಕ ಸಂಸ್ಥೆಯ ಸದಸ್ಯರು ಕಲ್ಲಡ್ಕ ಸಮಾನ ಮನಸ್ಸಿನ ವೀರರು …. ಬಿಗ್ ಸೆಲ್ಯೂಟ್ ಟು ಝಮಾನ್ ಇಂತಹ ಅದ್ಬುತ ಕಾರ್ಯಕ್ರಮ ಯಾವುದೇ ನ್ಯೂಸ್ ಚಾನಲ್ ಗಳಲ್ಲಿ ಅಥವಾ ನ್ಯೂಸ್ ಪೇಪರ್ ಗಳಲ್ಲಿ ವರದಿಯಾಗಲಿಲ್ಲ ಎಂಬುವುದೇ ಬೇಸರದ ಸಂಗತಿ ಖೇದಕರ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ನಾವೇ ಮಾಧ್ಯಮ ಎಂಬಂತೆ ಹಲವಾರು ಪೇಜ್ ಗಳಲ್ಲಿ ಹಲವಾರು ವೀಡಿಯೊ ಫೋಟೋ ವೈರಲ್ ಆಗ ತೊಡಗಿದೆ ಝಮಾನ್ ಬಾಯ್ಸ್ ಕಲ್ಲಡ್ಕ ಸಂಸ್ಥೆಗೂ , ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಗೂ ಕಲ್ಲಡ್ಕ ಸಮಾನ ಮನಸ್ಸಿನ ಜನರಿಗೂ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಪ್ರಶಂಸೆ ವ್ಯಕ್ತವಾಗಿದೆ…ಕೊನೆಯ ಮಾತು ಇಷ್ಟೇ ನೀವು ಮಾಡಿದಂತಹ ಈ ಕಾರ್ಯಕ್ರಮದಿಂದ ಹಲವಾರು ಯುವಕರಿಗೆ, ಸಂಘ, ಸಂಸ್ಥೆಗಳಿಗೆ ಮಾದರಿಯಾಗಿದೆ. ನನ್ನ ಆತ್ಮೀಯ ಗೆಳೆಯರು ಕೂಡ ಈ ಕಾರ್ಯಕ್ರಮದ ಮುತುವರ್ಜಿ ವಹಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾದವರು ಅದರಲ್ಲಿ ಬಹಳ ಸಂತೋಷವಿದೆ…. ಕಲ್ಲಡ್ಕ ಪರಿಸರದ ಎಲ್ಲಾ ಯುವಕರನ್ನು ಕೂಡ ನಾನು ಈ ಸಂದರ್ಭದಲ್ಲಿ ಪ್ರಶಂಸೆ ವ್ಯಕ್ತಪಡಿಸುತ್ತೇನೆ…ಇನ್ನೂ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮ ತಮ್ಮ ಮೂಲಕ ಈ ಸಮಾಜಕ್ಕೆ ಬರಲಿ ಎಂದು ಹಾರೈಸುತ್ತಿದ್ದೇನೆ…..

Big salute To Zaman boys and Blood Donars Team

✒️ ಮನ್ಸೂರ್ ವಾಮಂಜೂರು

Leave a Reply

Your email address will not be published. Required fields are marked *