ಗಾಂಧಿನಗರ: ಜೈಭಾರತ್ ಯುನೈಟೆಡ್ ಇದರ ಆಶ್ರಯದಲ್ಲಿ ಹಿರಿಯರ ಹಾಗೂ ಹಲವು ವರ್ಷಗಳ ಹಿಂದೆ ಫುಟ್ಬಾಲ್ ಪಂದ್ಯವನ್ನಾಡುತ್ತಿದ್ದ ಆಟಗಾರರಿಗೆ ‘ ಲೆಜೆಂಡ್ ಸಾಕರ್ ಲೀಗ್’ ಫುಟ್ಬಾಲ್ ಪಂದ್ಯಾಕೂಟವನ್ನು ಮೆ.18 ರಂದು ಗಾಂಧಿನಗರ ಶಾಲಾ ಮೈದಾನದಲ್ಲಿ ನಡೆಸಲಾಯಿತು. ಒಟ್ಟು ನಾಲ್ಕು ತಂಡದ ಈ ಪಂದ್ಯಾಟದಲ್ಲಿ ಹಿರಿಯರು ತಮ್ಮ ಹಳೆಯ ಆಟವನ್ನು ಪ್ರದರ್ಶಸಿದರು. ಲೀಗ್ ಹಂತದ ಪಂದ್ಯದಲ್ಲಿ ಸಾಕರ್ ಲೆಜೆಂಡ್ ಹಾಗೂ ಮಲಬಾರ್ ಲೆಜೆಂಡ್ ತಂಡ ಒಂದು ಪಂದ್ಯವು ಕೂಡಾ ಸೋಲದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ನಂತರ ರೋಚಕ ಫೈನಲ್ ಪಂದ್ಯ ಕೂಡಾ ಇತ್ತಂಡಗಳ ನಡುವೆ ನಡೆಯಿತು. ಫೀಲ್ಡ್ ನಲ್ಲಿ ಮತ್ತೊಮ್ಮೆ ಟೈ ಆಗಿ, 5-5 ಟೈ ಬ್ರೇಕರ್ ಶೂಟ್ ನಡೆಯಿತು, ನಂತರ ಸಡನ್ ಡೆತ್ ಟೈ ಬ್ರೇಕರ್‌ನಲ್ಲೂ ಕೂಡಾ ತಂಡ ಸಮಬಲವಾಯಿತು. ಕೊನೆಗೆ ಟಾಸ್ ಹಾಕುವ ಮೂಲಕ ವಿಜಯಿಶಾಲಿಯನ್ನು ತೀರ್ಮಾನಿಸಲಾಯಿತು. ಟಾಸ್ ನಲ್ಲಿ ‘ಲೆಜೆಂಡ್ಸ್ ಸೋಕರ್’ ತಂಡ ಚಾಂಪಿಯನ್ ಹಾಗೂ ‘ಮಲಬಾರಿ ಲೆಜೆಂಡ್’ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿತು. ಇನ್ನೂ ವೈಯಕ್ತಿಕ ಆಟಗಾರರಾಗಿ, ಟಾಪ್ ಸ್ಕೋರರ್ ಫರೀದ್, ಬೆಸ್ಟ್ ಗೋಲ್ ಕೀಪರ್ ಶಾಫಿ ನಾವೂರ್, ಬೆಸ್ಟ್ ಡಿಫೆಂಡರ್ ಫವಾಜ್ ಪಜ್ಜು, ಮ್ಯಾನ್ ಓಫ್ ದಿ ಸೀರಿಸ್ ರಿಝ್ವಾನ್ ಪಡೆದುಕೊಂಡರು. ಖಾದರ್ ಇವರನ್ನು ಪಂದ್ಗಾಟದ ಹಿರಿಯ ಆಟಗಾರ ಎಂದು ಗುರುತಿಸಲಾಯಿತು.