ಎರಡು ಕೆಜಿ ಮಾದಕವಸ್ತುವಿನೊಂದಿಗೆ ಬಂಧಿಸಲ್ಪಟ್ಟ ಸುಳ್ಯ ಮೂಲದ ಆರೋಪಿಗಳು ಪೊಲೀಸ್ ಕಸ್ಟಡಿಗೆ
ಮೇ 31ರಂದು ರಾತ್ರಿ 10:45 ರ ವೇಳೆ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಎರಡು ಕೆಜಿ ಗಾಂಜಾದೊಂದಿಗೆ ಉಪ್ಪಾರ್ ಪೇಟೆ ಪೊಲೀಸರು ಬಂಧಿಸಿದ್ದು
ಕ್ರೈಂ ನಂಬರ್ 158/2025 ರಲ್ಲಿ ಕೇಸ್ ದಾಖಲಾಗಿದ್ದು
ಬಂಧಿತ ಆರೋಪಿ 1 ಅಬ್ದುಲ್ ನವಾಜ್ ಯಾನೇ ನವಾಜ್ ಡೆಲ್ಮ (27 ವರ್ಷ)
ಕೋ : ಅಬ್ಬಾಸ್ ಡೆಲ್ಮ,ಅಜ್ಜಾವರ ಸುಳ್ಯ
ಆರೋಪಿ 2 ಅಲೆಕ್ಸ್ (24ವರ್ಷ), ಬಿನ್ ವರ್ಗೀಸ್ ಕೇರಳ ಇಡುಕ್ಕಿ ಮೂಲದ
ಸುಳ್ಯದ ಖಾಸಗಿ ವಿದ್ಯಾಸಂಸ್ಥೆಯ ಅಂತಿಮ ವರ್ಷದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.
ಆರೋಪಿಗಳನ್ನು 5ನೇ ಹೆಚ್ಚುವರಿ ಮ್ಯಾಜಿಸ್ಟ್ರೇಷನ್ ಕೋರ್ಟ್ ಗೆ ಹಾಜರು ಪಡಿಸಿದಾಗ ಉಪ್ಪಾರ್ ಪೇಟೆ ಪೊಲೀಸರ ಮನವಿ ಮೇರೆಗೆ ಹೆಚ್ಚಿನ ತನಿಖೆಗಾಗಿ ಎರಡು ದಿನದ ಪೊಲೀಸ್ ಕಸ್ಟಡಿಗೆ ಆರೋಪಿಗಳನ್ನು ನೀಡಲಾಗಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ.