ಮುಹಿಯುದ್ದೀನ್ ಜುಮಾ ಮಸ್ಜಿದ್ ಕಲ್ಲುಗುಂಡಿ ಅಧೀನದ ಹಯಾತುಲ್ ಇಸ್ಲಾಂ ಮದ್ರಸ ಸುಮಾರು 50ಕ್ಕೂ ಹೆಚ್ಚಿನ ವರ್ಷಗಳಿಂದ ವಿದ್ಯಾರ್ಥಿಗಳಿಗೆ ಧಾರ್ಮಿಕ ವಿದ್ಯಾಭ್ಯಾಸವನ್ನು ನೀಡುತ್ತಾ ಉತ್ತಮ ಸಮುದಾಯವನ್ನು ಸೃಷ್ಟಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ದಿನಾಂಕ 9.6.2025 ರಂದು ನಡೆದ ಹಳೆ ವಿದ್ಯಾರ್ಥಿಗಳ ಸಂಗಮದಲ್ಲಿ ಹೆಚ್ಚಿನ ಸದಸ್ಯರು ಭಾಗವಹಿಸಿ, ಹಳೆ ವಿದ್ಯಾರ್ಥಿ ಸಂಘದ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಅಶ್ರಫ್ ಕೆ ಎಂ ಅಧ್ಯಕ್ಷತೆಯಲ್ಲಿ ಎ.ಎಂ.ಫೈಝಲ್ ಝುಹ್ರಿ ದುಆ ನೆರವೇರಿಸಿ, ಅಬ್ಬಾಸ್ ಹಾಜಿ ಶುಭನುಡಿಗಳನ್ನಾಡಿದರು. ಈ ನಡುವೆ ಹಳೆ ವಿದ್ಯಾರ್ಥಿಗಳ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಮುನೀರ್ ಕೆ ಎಂ, ಉಪಾಧ್ಯಕ್ಷರುಗಳಾಗಿ ನಿಝಾಂ ಎಸ್.ಎ., ಆಶಿಕ್ ಕೆ ಹೆಚ್, ಪ್ರಧಾನ ಕಾರ್ಯದರ್ಶಿಯಾಗಿ ಸ್ವಾದಿಕ್, ಜೊತೆ ಕಾರ್ಯದರ್ಶಿಗಳಾಗಿ ಅಮೀರ್ ಕೆ ಹೆಚ್, ರಾಶಿದ್ ಎಂ ಎ, ಕಾರ್ಯದರ್ಶಿಗಳಾಗಿ ಹಸೈನ್ ಚಟ್ಟೆಕಲ್ಲು, ಫಾರೂಕ್ ಕಾನಾಕ್ಕೋಡ್ , ಕೋಶಾಧಿಕಾರಿಯಾಗಿ ಉದೈಫ ದಂಡಕಜೆ, ಸದಸ್ಯರಾಗಿ ಎ ಎಂ ಫೈಝಲ್ ಝುಹ್ರಿ, ಅಬ್ದುಲ್ ಖಾದರ್ ದೊಡ್ಡಡ್ಕ, ಲತೀಫ್, ಹನೀಫ್ ಬಿ ಎಸ್, ನವಾಝ್ ಹೆಚ್ ಎಸ್, ಮಿರ್ಶಾದ್ ನೆಲ್ಲಿಕುಮೇರಿ, ಶಾಝ್, ನವಾಝ್ ಚಟ್ಟೆಕ್ಕಲ್ಲು, ರುಶೈದ್, ಅಶ್ಫಾಕ್, ನಬ್ಹಾನ್ ಆಯ್ಕೆಯಾದರು. ಸಲಹಾ ಸಮಿತಿ ಸದಸ್ಯರಾಗಿ ಅಬ್ಬಾಸ್ ಹಾಜಿ ಹೆಚ್ ಎ, ಅಶ್ರಫ್ ಕೆ ಎಂ, ಇಬ್ರಾಹಿಂ ಎ ಕೆ, ರಝಾಕ್ ಸೂಪರ್, ರಫೀಕ್ ಕೆ ಎಂ ಆಯ್ಕೆಯಾದರು. ಸ್ವಾದಿಕ್ ಮಾಸ್ಟರ್ ಸ್ವಾಗತಿಸಿ ವಂದಿಸಿದರು.