
ಜಿಲ್ಲೆಯ ಎಲ್ಲಾ ಬ್ಲಡ್ ಬ್ಯಾಂಕ್ಗಳಲ್ಲಿ ರೋಗಿಗಳಿಗೆ ಅವಶ್ಯಕತೆಗನುಸಾರವಾಗಿ ಪೂರೈಸಲಾಗುವ ರಕ್ತಗಳಿಗೆ ಈಗಾಗಲೇ ಪರೀಕ್ಷಾ ಮತ್ತು ಪರಿಶೀಲನಾ ವೆಚ್ಚವನ್ನು ನಿಗದಿಪಡಿಸಲಾಗಿದೆ ಮತ್ತು ಅದನ್ನು ರೋಗಿಗಳೇ ಭರಿಸುತ್ತಿದ್ದಾರೆ. ರಕ್ತ ವಿಂಗಡಣೆ ಪ್ರಕ್ರಿಯೆಗಳಾದ ಪ್ಲಾಸ್ಟಾ, ಪ್ಲೇಟ್ಲೇಟ್ ಮತ್ತು ಕ್ರಯೋ ಹೀಗೇ ಪ್ರತಿಯೊಂದಕ್ಕೂ ಬ್ಲಡ್ ಬ್ಯಾಂಕ್ಗಳಲ್ಲಿ ನಿರ್ದಿಷ್ಟ ದರ ನಿಗದಿಪಡಿಸಲಾಗಿದೆ.
ಜಿಲ್ಲೆಯ ವಿವಿಧ ಖಾಸಗಿ ರಕ್ತ ನಿಧಿಗಳಲ್ಲಿ ಪ್ಯಾಕ್ಸ್ಸೆಲ್ ಒಂದು ಯುನಿಟ್ ರಕ್ತಕ್ಕೆ ರೂ 750 ರಿಂದ ರೂ 900 ರವರೆಗೆ ದರ ನಿಗದಿಯಾಗಿದೆ ಅದರಂತೆ ಕಾರ್ಯಾಚರಿಸುತ್ತಿದೆ. ಆದರೆ ಜಿಲ್ಲೆಯ ಕೆಲ ರಕ್ತ ನಿಧಿಯಲ್ಲಿ ಒಂದು ಯುನಿಟ್ ಪ್ಯಾಕ್ಸ್ಸೆಲ್ಗೆ ರೂ 1985/- ಸ್ವೀಕರಿಸಿದ್ದು ರೋಗಿಗಳ ಕುಟುಂಬಸ್ಥರ ಮುಖೇನ ನಮ್ಮ ಗಮನಕ್ಕೆ ಬಂದಿರುತ್ತದೆ. ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಅದರಲ್ಲೂ ಶಸ್ತ್ರ ಚಿಕಿತ್ಸೆಗೆ ಒಳಪಡುವ ರೋಗಿಗಳಿಗೆ ದುಪ್ಪಟ್ಟು ಅಧಿಕವಾಗಿರುವ ಈ ಪರೀಕ್ಷಾ ವೆಚ್ಚವನ್ನು ಭರಿಸಲು ಕಷ್ಟ ಮತ್ತು ಇದು ಐದಾರು ಯುನಿಟ್ ರಕ್ತ ಬೇಕಾಗುವಾಗ ರೋಗಿಗಳ ಮೇಲೆ ದೊಡ್ಡ ಹೊರೆಯೇ ಸರಿ. ದಿಢೀರ್ ಆಗಿ ಏರಿಕೆಯಾಗಿರುವ ಮೊತ್ತವನ್ನು ರೋಗಿಗಳಿಗೆ ಅತೀವ ಹೊರೆಯಾಗದಂತೆ ಕಡಿಮೆಗೊಳಿಸಲು ಸಂಬಂಧಪಟ್ಟ ಆಡಳಿತ ಮಂಡಳಿಗಳಿಯವರಿಗೆ ತಿಳಿಸಬೇಕೆಂದು ಈ ಮಲ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಸ್ಥಾಪಕರಾದ ಸಿದ್ದೀಕ್ ಮಂಜೇಶ್ವರ, ಅಧ್ಯಕ್ಷರಾದ ನವಾಝ್ ನರಿಂಗಾನ, ಕಾರ್ಯದರ್ಶಿ ಶಾಹುಲ್ ಹಮೀದ್ ಕಾಶಿಪಟ್ನ, ಸದಸ್ಯರಾದ ಫರ್ಝಾನ್ ಸಿದ್ದಕಟ್ಟೆ, ರಝಾಕ್ ಸಾಲ್ಮಾರ ಉಪಸ್ಥಿತರಿದ್ದರು.