Nammasullia: ಪಂಜಿಕಲ್ಲು ತೂಗು ಸೇತುವೆಯ ಬಳಿ ಪಯಶ್ವಿನಿ ನದಿಯಲ್ಲಿ ತೇಲಿ ಬರುತ್ತಿದ್ದ ತೆಂಗಿನಕಾಯಿಯನ್ನು ಹಿಡಿಯಲು ಓದ ವ್ಯಕ್ತಿ ನೀರುಪಾಲಾಗಿ ಬಳಿಕ ಊರವರು ಸೇರಿ ಆತನನ್ನು ರಕ್ಷಿಸಿದ ಘಟನೆ ನಡೆದಿದೆ.

ಮಳೆಗಾಲದಲ್ಲಿ ತೆಂಗಿನಕಾಯಿ, ಮರ-ದಿಮ್ಮಿಗಳು ನದಿಯಲ್ಲಿ ತೇಲಿಕೊಂಡು ಬರುವುದ ಸರ್ವೇಸಾಮಾನ್ಯ, ಹೀಗೆ ನದಿಯಲ್ಲಿ ತೆಂಗಿನಕಾಯಿ ತೇಲಿಕೊಂಡು ಬರುವುದನ್ನು ನೋಡಿದ ಪಂಜಿಕಲ್ಲಿನ ನಿವಾಸಿ ವಿಜಯ ಎಂಬ ವ್ಯಕ್ತಿ ತೆಂಗಿನಕಾಯಿ ಹಿಡಿಯುವ ಭರದಲ್ಲಿ ನಿಯಂತ್ರಣ ತಪ್ಪಿ ನೀರು ಪಾಲಾಗಿ ರಕ್ಷಣೆಗಾಗಿ ಅಂಗಲಾಚುತ್ತಿದ್ದರು. ಈ ಸಮಯ ಅರುಣ್ ಕುಮಾರ ಪಂಜಿಕಲ್ಲು, ಹರೀಶ್ ದೇಲಂಪಾಡಿ, ದೀಪಕ್ ದೇವರಗುಂಡ, ಪ್ರಸಾದ್ ಅಡ್ಕಾರು, ಸುನಿಲ್ ಬೆಳ್ಳಿಪಾಡಿ, ಉದಯ ಪಂಜಿಕಲ್ಲು, ಚೇತನ್ ಪಂಜಿಕ್ಕಲ್ಲು, ಸೀತಾರಾಮ ಪಂಜಿಕ್ಕಲ್ಲು, ಕೇಶವ ನಾಟೆಕಲ್ಲು, ಭಾಸ್ಕರ ಪೊಳಲಿ ಮುಂತಾದವರು ಸೇರಿ ಆತನನ್ನು ರಕ್ಷಿಸಿದ ಘಟನೆ ನಡೆದಿದೆ.

ವರದಿ: ಅಬೂತ್ವಾಹಿರ್ ಪಂಜಿಕಲ್ಲು

Leave a Reply

Your email address will not be published. Required fields are marked *