ಜಯನಗರ ವಾರ್ಡ್ ನ ಮುಖ್ಯ ರಸ್ತೆ ಹೊಂಡ ಗುಂಡಿಗಳಿಂದ ರಸ್ತೆ ಇದೆಯೋ ಅಥವಾ ಇಲ್ಲವೋ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರತ್ಯುತ್ತರ ನೀಡಿರಲಿಲ್ಲ. ಪರಿಣಾಮ ಜು.7 ರಂದು ಜಯನಗರ ಮಿಲಿಟರಿ ಗ್ರೌಂಡ್ ಸಮೀಪದಲ್ಲಿ ನೂರಾರು ಸಂಖ್ಯೆಯಲ್ಲಿ ಜಯನಗರ ನಿವಾಸಿಗಳು ಭಾಗವಹಿಸಿ ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆ ನಡೆಸಿ ದುರಸ್ಥಿಗಾಗಿ ಅಗ್ರಹ ವ್ಯಕ್ತ ಪಡಿಸಿದರು.

ಸ್ಥಳೀಯ ಮುಖಂಡರುಗಳಾದ ರಾಕೇಶ್ ಕುಂಟಿಕ್ಕಾನ, ಬೆಟ್ಟ ಜಯರಾಮ್ ಭಟ್, ಜೂಲಿಯಾನ ಕ್ರಾಸ್ತ, ಮುದ್ದಪ್ಪ ಜಯನಗರ, ರಂಜಿತ್ ಕುಮಾರ್, ನ.ಪಂ ಸದಸ್ಯ ಶರೀಫ್ ಕಂಠಿ ಮೊದಲಾದವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಜಯನಗರ ವಾರ್ಡ್ ಬಹಳ ವಿಸ್ತಾರವಾದ ಪ್ರದೇಶವಾಗಿದ್ದು ನೂರಾರು ಕುಟುಂಬಗಳು ವಾಸಿಸುವ ಪ್ರದೇಶವಾಗಿದೆ. ಜಯನಗರಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆ ಕಳೆದ ಹಲವಾರು ವರ್ಷಗಳಿಂದ ಹದಗೆಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಬಹಳ ವರ್ಷದಿಂದ ಮನವಿ ನೀಡುವುದು, ಹೋರಾಟ ಮಾಡುವುದನ್ನು ಮಾಡಿಕ್ಕೊಂಡು ಬರುತ್ತಿದ್ದೇವೆ. ಆದರೆ ಬರು ಬರುತ್ತಾ ಪರಿಸ್ಥಿತಿ ತುಂಬಾ ಕಷ್ಟಕರ ವಾಗುತ್ತಿದ್ದು, ಶೀಘ್ರವಾಗಿ ರಸ್ತೆ ದುರಸ್ತಿ ಪಡಿಸಲು ಆಗ್ರಹಿಸಿ ಸ್ಥಳೀಯರಾದ ನಾವೆಲ್ಲರೂ ಇಂದು ಪಕ್ಷ ಭೇದ ಮರೆತು ಪ್ರತಿಭಟನೆ ಮೂಲಕ ನಗರ ಪಂಚಾಯತ್ ಅನ್ನು ಆಗ್ರಹಿಸುತಿದ್ದೇವೆ ಎಂದು ಆಕ್ರೋಶವನ್ನು ವ್ಯಕ್ತ ಪಡಿಸಿದರು. ಇಲ್ಲಿಯ ಇಬ್ಬರು ನ. ಪಂ ಸದಸ್ಯರುಗಳು ಗಾಢವಾದ ನಿದ್ರೆಯಿಂದ ಇಲ್ಲಿನ ಹದಗೆಟ್ಟ ರಸ್ತೆಗಳು ಸರಿಯಾಗದೆ ಇರಲು ಕಾರಣವಾಗಿದೆ ಎಂದು ಸೇರಿದ ಪ್ರತಿಭಟನಾಕಾರರು ಆಕ್ರೋಶವನ್ನು ವ್ಯಕ್ತಪಡಿಸಿ ಸ್ಥಳೀಯ ನಗರ ಪಂಚಾಯತ್‌ ಸದಸ್ಯರುಗಳಿಗೆ ಮತ್ತು ನಗರ ಪಂಚಾಯತ್ ಆಡಳಿತಕ್ಕೆ ಧಿಕ್ಕಾರವನ್ನು ಕೂಗಿ ಆಕ್ರೋಶ ವ್ಯಕ್ತ ಪಡಿಸಿದರಲ್ಲದೆ ಪಂಚಾಯತ್‌ ಅಧ್ಯಕ್ಷರು ಅಥವಾ ಮುಖ್ಯಾಧಿಕಾರಿಗಳು ಇಲ್ಲಿಗೆ ಬಂದು ನಮ್ಮ ಮನವಿ ಸ್ವೀಕರಿಸಿ ಆದಷ್ಟು ಶೀಘ್ರದಲ್ಲಿ ರಸ್ತೆ ದುರಸ್ಥಿ ಪಡಿಸಿ ಕೊಡುವ ಬಗ್ಗೆ ಪೂರ್ಣ ಭರವಸೆ ನೀಡಬೇಕೆಂದು ಆಗ್ರಹಿಸಿದರು. ರಸ್ತೆಯಲ್ಲಿ ಇದ್ದ ಹೊಂಡದಲ್ಲಿ ಗಿಡ ನೆಟ್ಟು, ಹಲವು ರೀತಿಯ ಆಕ್ರೋಶ ಭರಿತ ಪೋಸ್ಟರ್ ಗಳನ್ನು ಹಿಡಿದು ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರಹಾಕಿದರು.


ಬಳಿಕ ಪ್ರತಿಭಟನಾ ಸ್ಥಳಕ್ಕೆ ಮುಖ್ಯ ಅಧಿಕಾರಿ ಸುಧಾಕರ್ ಮತ್ತು ಜಯನಗರ ಮೂರನೇ ವಾರ್ಡ್ ಸದಸ್ಯರಾದ ಬಾಲಕೃಷ್ಣ ಭಟ್ ಕೊಡಂಕೇರಿಯವರು ಬಂದಿದ್ದು ಪ್ರತಿಭಟನಾಕಾರರು ಇನ್ನೂ ಜೋರಾಗಿ ದಿಕ್ಕಾರ ಕೂಗಲು ಆರಂಭಿಸಿದರು. ಈ ಸಂಧರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಅಶ್ರಫ್‌ ಸಂಗಮ್, ಶ್ರೀಮತಿ ತಾರಾ ಆರ್.ರೈ, ಡಿ ಆರ್ ಗಾರ್ಮೆಂಟ್ಸ್ ಮಾಲಾಕ ರಾಮಚಂದ್ರ, ಪ್ರಸನ್ನ ಕುಮಾರ್, ಸಂಘಟಕರಾದ ಸುಂದರ ಕುದ್ಪಾಜೆ, ರಮೇಶ್ ಪೂಜಾರಿ, ಶಫೀಕ್ ಜಯನಗರ, ಮಹಮ್ಮದ್ ಮುಟ್ಟತ್ತೋಡಿ, ನವಾಝ್ ಪಂಡಿತ್, ಶರೀಫ್ ಜಯನಗರ, ದಯಾನಂದ ಕುದ್ಪಾಜೆ, ಸಚಿನ್ ಕೊಯಿಂಗೋಡಿ, ಪ್ರಸನ್ನ ಕುದ್ದಾಜೆ, ಮಜೀದ್‌ ಕುತ್ತಮೊಟ್ಟೆ, ಇಲ್ಯಾಸ್, ಅಬ್ದುಲ್ಲಾ ಹಾಜಿ, ಓಸಾಲ್ಡ್ ಕ್ರಾಸ್ತಾ, ಪೊನ್ನಾರ್, ನಿಸರ್ಗ ಇಂಡಸ್ಟ್ರೀಸ್ ನ ಸಿಬ್ಬಂದಿಗಳು, ಹಾಗೂ ಸ್ಥಳೀಯ ನೂರಾರು ಮಂದಿ ಪ್ರಮುಖರು ಉಪಸ್ಥಿತರಿದ್ದರು. ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಮುಖ್ಯ ಅಧಿಕಾರಿಯವರು ಮಾತನಾಡಿ ‘ಇದೀಗ ರಸ್ತೆಯ ಹೊಂಡ ಮುಚ್ಚಿ, ಚರಂಡಿ ರಿಪೇರಿ ಮಾಡಿ ಸಂಚಾರಕ್ಕೆ ಯೋಗ್ಯ ರೀತಿಯಲ್ಲಿ ಸರಿಪಡಿಸಲಾಗುವುದು. ಮಳೆ ಕಡಿಮೆಯಾದ ಬಳಿಕ ಸಂಪೂರ್ಣ ರಸ್ತೆಯ ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಪ್ರತಿಭಟನಾ ಕಾರರು ಇದು ಕೇವಲ ಭರವಸೆ ಮಾತ್ರವಾಗದೆ ಕೂಡಲೇ ಕಾರ್ಯಪ್ರವೃತ್ತಿ ಕೂಡ ಆಗಬೇಕು ಇಲ್ಲದಿದ್ದರೆ ಮುಂದಿನ ಹೋರಾಟ ಪಂಚಾಯತ್ ಮುಂಭಾಗ ದಲ್ಲಿ ಇರುತ್ತದೆ ಎಂದು ಎಚ್ಚರಿಕೆಯ ಕರೆ ಗಂಟೆಯನ್ನು ನೀಡಿ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಉಸ್ಮಾನ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *