ಕಾಸರಗೋಡು: ಸುಳ್ಯ ಜಟ್ಟಿಪಳ್ಳ ನಿವಾಸಿಯಾಗಿದ್ದ, ಜಟ್ಟಿಪಳ್ಳ ಮಸೀದಿ, ಜಟ್ಟಿಪಳ್ಳ ಶಾಲಾ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷರು, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶರೀಫ್ ಜಟ್ಟಿಪಳ್ಳ ಇವರ ಮಾವ (ತಾಯಿಯ ಸಹೋದರ) ಪ್ರಸ್ತುತ ಅಡೂರು ಪಳ್ಳಂಗೋಡು ನಿವಾಸಿ ಅಬ್ದುಲ್ಲಾ ಕೆ ಎಂ ರವರು ಜು. 8 ರಂದು ಕಾಸರಗೋಡು ಇ ಕೆ ನಾಯನಾರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ ಮರಿಯಮ್ಮ, ಗಂಡು ಮಕ್ಕಳಾದ ಬಶೀರ್, ಕಾದರ್, ಸಂಶುದ್ದೀನ್, ಜಾಫರ್ ಅದೇ ರೀತಿ ಹೆಣ್ಣು ಮಕ್ಕಳಾದ ಫಾತಿಮಾ, ಅಯಿಷಾ, ರಾಬಿಯಾ, ಸುಲೈಕಾ, ನೆಬಿಸ, ಹಾಗೂ ಮೊಮ್ಮಕ್ಕಳು, ಮತ್ತು ಅಪಾರ ಕುಟುಂಬಸ್ಥರು, ಹಿತೈಷಿ ವೃಂದವನ್ನು ಅಗಲಿದ್ದಾರೆ, ಜನಾಝಾ ನಮಾಝ್ ಮಧ್ಯಾಹ್ನ 12 ಗಂಟೆಗೆ ಪಳ್ಳಂಗೊಡು ಮಸೀದಿಯಲ್ಲಿ ನಡೆಯಲ್ಲಿದ್ದು ನಂತರ ಧಫನ ಕಾರ್ಯ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ.


