ಅರಂತೋಡು ಗ್ರಾಮ ಪಂಚಾಯತ್ ಘನ ತ್ಯಾಜ್ಯ ಘಟಕಕ್ಕೆ ಜು9ರಂದು ಸಂಜೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಶೇಖರಣೆ ಇರಿಸಿದ ಪ್ಲಾಸ್ಟಿಕ್ ತ್ಯಾಜ್ಯಗಳಿಗೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದ ಘಟನೆ ಅರಂತೋಡು ಕೊಡೆಂಕೆರಿ ಯಲ್ಲಿ ನಡೆದಿದೆ. ತ್ಯಾಜ್ಯ ಘಟಕದಲ್ಲಿ ಸಿಬ್ಬಂದಿಯವರು 5.00 Pm ಗಂಟೆಗೆ ಕೆಲಸ ಮುಗಿಸಿ ತೆರಳಿದ ಕೆಲವೇ ಕ್ಷಣದಲ್ಲಿ ಬೆಂಕಿ ಆವರಿಸಿದೆ. ಘಟಕದಲ್ಲಿ ಹೊಗೆ ಅವರಿಸಿದನ್ನು ಕಂಡು ಅಕ್ಕ ಪಕ್ಕದ ಮನೆಯವರು ಘಟಕದ ಸಿಬ್ಬಂದಿಯವರಿಗೆ ಕರೆ ಮಾಡಿ ತಿಳಿಸಿದರು. ತಕ್ಷಣವೇ ಪಂಚಾಯತ್ ಸಿಬ್ಬಂದಿ ಈಶ್ವರ ಮೋಹನ ಸ್ಥಳಕ್ಕೆ ಬಂದರು. ಅರಂತೊಡಿನ ವಾಹನ ಚಾಲಕರಿಗೆ ಮಾಹಿತಿ ಸಿಕ್ಕಿ ತೆರಳಿದರು.ಆವಾಗಲೇ ಪ್ಲಾಸ್ಟಿಕ್ ತ್ಯಾಜ್ಯ ಗಳಿಗೆ ಬೆಂಕಿ ಆವರಿಸಿ ಉರಿಯುತ್ತಿತ್ತು. ತ್ಯಾಜ್ಯ ವಾಹನದ ಚಾಲಕ ಬೆಳ್ಳಿಯಪ್ಪ ರವರು ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಅವರಿಗೆ ಮತ್ತು ಪಿಡಿಒ ಜಯಪ್ರಕಾಶ್ ರವರಿಗೆ ಮಾಹಿತಿ ನೀಡಿದರು.ಘಟನೆಯ ವಿಷಯ ತಿಳಿದ ತಕ್ಷಣ ಅದ್ಯಕ್ಷ ಕೇಶವ ಆಡ್ತಲೆ ಹಾಗೂ ಅರಂತೋಡು ಜನರು ಧಾವಿಸಿದರು. ತಾಜುದ್ದೀನ್ ಅರಂತೋಡು ರವರು ಅಗ್ನಿ ಶಾಮಕ ದಳ ಅವರಿಗೆ ಕರೆ ಮಾಡಿ ತಿಳಿಸಿದರು. ಆವಾಗಲೇ ಬೆಂಕಿ ವಿಪರೀತವಾಗಿ ಅವರಿಸಿದರಿಂದ ನಂದಿಸಲು ಹರ ಸಾಹಸ ಪಡಬೇಕಾಯಿತು. ಅಗ್ನಿ ಶಾಮಕ ದಳದವರು ನೀರು ಹಾಯಿಸಿ ಖಾಲಿ ಯಾಗಿ ನಿತ್ಯಾನಂದ ಕುಕ್ಕುಂಬಳ ರವರ ಕೆರೆಯಿಂದ ನೀರು ತುಂಬಿಸಿ ತಂದು ಸಿಂಪಡಿಸಲಾಯಿತು. ಮೂರು ಬಾರಿ ನೀರು ಖಾಲಿಯಾಗಿ ನೀರು ತಂದು ಸಿಂಪಡಿಸಿದರು ಆದರೂ ಬೆಂಕಿ ಆರಿಸಲು ಸಾದ್ಯವಾಗಲಿಲ್ಲ.ಸ್ವಾಮಿ ಕೊರಗಜ್ಜ ಸನ್ನಿಧಿಯ ಬೋರ್ವೆಲ್ ನಿಂದ ಪೈಪು ಹಾಕಿ ನೀರಿನ ವ್ಯವಸ್ತೆಯನ್ನು ಮಾಡಿದರು.ಬೆಂಕಿ ನಂದಿಸಲು ಸಾಧ್ಯವಾಗದೆ ಜೆಸಿಬಿಯನ್ನು ತರಿಸಿ ನೀರು ಹಾಕಿದ ಪ್ಲಾಸ್ಟಿ ಕನ್ನು ಬದಿಗೆ ಹಾಕಲಾಯಿತು. ಸ್ಥಳಕ್ಕೆ ಆಗಮಿಸಿದ ಎಸ್ ಐ ಯವರು ಬಂದು ತ್ಯಾಜ್ಯ ಉರಿಯುತ್ತಿರುವ ಪ್ಲಾಸ್ಟಿಕ್ ಉಪಯೋಗ ಬಾರದು ಮತ್ತೆ ಅದರಿಂದ ಏನು ಪ್ರಯೋಜನ ವಿಲ್ಲ ಜೆಸಿಬಿ ಕೆಲಸ ವನ್ನೂ ನಿಲ್ಲಿಸುವುದು ಉತ್ತಮ ಎಂದರು. ಅದರ ಒಳಗಿರುವ ದಾಖಲೆ ಪತ್ರ,ಪಂಚಿಗ್ ಮಿಷನ್, ಗಡಿವಾಷ್ ಮಿಷನ್ ಎಲ್ಲವೂ ಬೆಂಕಿಯಲ್ಲಿ ಸುಟ್ಟು ಹೋಯಿತು.9 ಗಂಟೆಯವರೆಗೆ ಬೆಂಕಿ ಉರಿಯುತ್ತಿತ್ತು ಎಂದು ತಿಳಿದು ಬಂದಿದೆ. ನೂರಾರು ಜನರು ವಿಷಯ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿ ಬಂದರು .ಘಟನಾ ಸ್ಥಳಕ್ಕೆ ಸುಳ್ಯ ತಾಲ್ಲೂಕು ಇ ಒ ರಾಜಣ್ಣ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್,ಅರಂತೋಡು ತೋಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್,ದಯಾನಂದ ಕುರುಂಜಿ ,ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಪುಷ್ಪ ಮೆದಪ್ಪ,ಪಂಚಾಯತ್ ಸದಸ್ಯರಾದ ಮಾಲಿನಿ,ಗಂಗಾಧರ ಬನ,ಶಿವಾನಂದ ಕುಕ್ಕುಂಬಳ, ಕುಸುಮಾಧರ ಅಡ್ಕಬಳೆ , ಕೆಡಿಪಿ ಸದಸ್ಯ ಅಶ್ರಫ್ ಗುಂಡಿ. ಪೊಲಿಸ್ ಸಿಬ್ಬಂದಿಯವರು ಸ್ಥಳಕ್ಕೆ ಭೇಟಿ ನೀಡಿದರು.ಅಗ್ನಿ ಶಾಮಕದಳ ರೊಂದಿಗೆ ಪಾವನ,ಚೇತನ,ಹನೀಫ್ ಮೊಟ್ಟಾಂಗಾರ್,ರಾಜು,ಪ್ರಸನ್ನ,ಮೋಹನ ಪಾರೆಮಜಲು,ಕಿಶೋರ್ ,ಸುಬ್ರಾಯ , ಚೌಕಾರು, ಬೆಂಕಿ ನಂದಿಸಲು ಸಹಕರಿಸಿದರು.
