ಸುಳ್ಯ: ಥಾಯ್‌ಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಎಫ್‌ಕೆಕೆ ಇಂಟರ್‌ನ್ಯಾಷನಲ್ ಕಪ್ ಷಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸುಳ್ಯದ ಬ್ಯಾಡ್ಮಿಂಟನ್ ಆಟಗಾರ ರಿಜ್ವಾನ್ ಅಹಮ್ಮದ್ ಭಾರತವನ್ನು ಪ್ರತಿನಿಧಿಸಿ ಭಾಗವಹಿಸುತ್ತಿದ್ದಾರೆ.

ಜು.10ರಿಂದ 14ರ ತನಕ ಬ್ಯಾಂಕಾಂಕ್‌ನಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ವಿಶ್ವದ ಖ್ಯಾತ ಬ್ಯಾಡ್ಮಿಂಟನ್ ತಂಡಗಳು ಭಾಗವಹಿಸುತ್ತಿವೆ. ಪಂದ್ಯಾಟದ ವಿವಿಧ ವಿಭಾಗಗಳಲ್ಲಿ ಕರ್ನಾಟಕದ 6 ಮಂದಿ ಸೇರಿ ದೇಶದ 36 ಮಂದಿ ಆಟಗಾರರು ಭಾಗವಹಿಸುತ್ತಿದ್ದಾರೆ. ಹಲವು ರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ರಿಜ್ವಾನ್ ಅಹಮ್ಮದ್ ಜನತಾ ಅವರು ಈ ಹಿಂದೆ ವಿಯೆಟ್ನಾಂ, ಸಿಂಗಾಪುರಗಳಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದರು.

