ಸುಳ್ಯ: ಸುಳ್ಯ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ, ಜನಪ್ರಿಯ ವೈದ್ಯರಾದ ಡಾ.ಕರುಣಾಕರ ಕೆ.ವಿ.ಅವರು ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ವರ್ಗಾವಣೆಗೊಂಡಿದ್ದಾರೆ. ಸುಳ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿ ಕಳೆದ 18 ವರ್ಷಗಳಿಂದ
ಸುಳ್ಯ ಸೇವೆ ಸಲ್ಲಿಸುತ್ತಿರುವ ಅವರು ಸುಮಾರು 14 ವರ್ಷಗಳ ಕಾಲ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಡಳಿತ ವೈದ್ಯಾಧಿಕಾರಿಯಾಗಿ ಸುಳ್ಯ ಸಾರ್ವಜನಿಕ ಆಸ್ಪತ್ರೆಯ ಅಭಿವೃದ್ಧಿಗೆ ಅವರು ನಿರಂತರ ಪ್ರಯತ್ನ ನಡೆಸಿದ್ದಾರೆ. ಜನಾನುರಾಗಿ ವೈದ್ಯರಾಗಿ ಹೆಸರು ಗಳಿಸಿ, ತಾಲೂಕಿನ ಜನರ ಪ್ರೀತಿಗೆ ಪಾತ್ರರಾಗಿದ್ದರು.
ಆಡಳಿತ ವೈದ್ಯಾಧಿಕಾರಿಯ ಪ್ರಭಾರವನ್ನು ಡಾ. ಶಿವಕುಮಾರ್ ಎ.ಸಿ ಅವರಿಗೆ ನೀಡಿದ್ದೇನೆ ಎಂದು ಡಾ.ಕರುಣಾಕರ ತಿಳಿಸಿದ್ದಾರೆ.


