SჄS ಕರ್ನಾಟಕ ರಾಜ್ಯ ಸಮಿತಿ ನಡೆಸುವ ಸೌಹಾರ್ದ ಸಂಚಾರ ಕಾರ್ಯಕ್ರಮವು ಕುಂದಾಪುರದಿಂದ ಸುಳ್ಯ ದವರೆಗೆ ನಡೆಯಲಿದ್ದು ಅದರ ಸಮಾರೋಪ ಸಮಾರಂಭವು ಸುಳ್ಯ ದಲ್ಲಿ ದಿನಾಂಕ 16 ನೇ ತಾರೀಕಿನಂದು ವಿಜೃಂಭಣೆಯಿಂದ ನಡೆಯಲಿದ್ದು ಅದರ ಪ್ರಚಾರಾರ್ಥ ಸುಳ್ಯ ಝೋನ್ ವ್ಯಾಪ್ತಿಯಲ್ಲಿ ಉಪಯಾತ್ರೆಗೆ ಇಂದು ಚಾಲನೆ ನೀಡಲಾಯಿತು. ಯಾತ್ರಾ ನಾಯಕರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ ಯವರಿಗೆ SჄS ಸುಳ್ಯ ಝೋನ್ ನಾಯಕರು ಧ್ವಜ ಹಸ್ತಾಂತರ ಮಾಡುವ ಮೂಲಕ ಎರಡು ದಿನಗಳ ಉಪಯಾತ್ರೆಗೆ ಚಾಲನೆ ನೀಡಿದರು. ಆದಿತ್ಯವಾರ ಗಾಂಧಿನಗರ ದಿಂದ ಆರಂಭಗೊಂಡು ಪಳ್ಳಿಮಜಲು, ಬೆಳ್ಳಾರೆ, ತಂಬಿನಮಕ್ಕಿ, ಮಾಲಂಗೇರಿ, ಇಂದ್ರಾಜೆ, ಗುತ್ತಿಗಾರು, ಎಲಿಮಲೆ, ಮೇನಾಲ, ಕಲ್ಲುಗುಂಡಿ, ಗೂನಡ್ಕ, ಏಣಾವರ, ಕುಂಬಕ್ಕೋಡು, ಪೈಂಬಚ್ಚಾಲು, ಮಂಡೆಕೋಲು, ಇರುವಂಬಳ್ಳ, ಜಾಲ್ಸೂರು-ಅಡ್ಕಾರು, ಸುಣ್ಣಮೂಲೆ ಮೂಲಕ ಹಾದು ಮೊಗರ್ಪಣೆ ಯಲ್ಲಿ ಸಮಾರೋಪಗೊಳ್ಳಲಿದೆ.
ಚಾಲನಾ ಕಾರ್ಯಕ್ರಮದಲ್ಲಿ ಎ.ಎಂ.ಫೈಝಲ್ ಝುಹ್‌ರಿ ಯವರು ದುಆಃ ಮೂಲಕ ಉಧ್ಘಾಟಸಿ, ಎಸ್ ವೈ ಎಸ್ ಝೋನ್ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಗೂನಡ್ಕ ಸ್ವಾಗತಿಸಿದರು. ಯಾತ್ರಾ ನಾಯಕರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ಸರ್ಕಲ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕಾದರ್ ಹಣೆಗೇರಿ, ಅಜ್ಜಾವರ ಸರ್ಕಲ್ ಉಸ್ತುವಾರಿ ಸಿದ್ದೀಖ್ ಕಟ್ಟೆಕಾರ್, ಗಾಂಧಿನಗರ ಯೂನಿಟ್ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಅಬೂಬಕ್ಕರ್ ಜಟ್ಟಿಪಳ್ಳ, ಎಸ್ ವೈ ಎಸ್ ಸುಳ್ಯ ಝೋನ್ ಕೋಶಾಧಿಕಾರಿ ಶಮೀರ್ ಮೊಗರ್ಪಣೆ, ಸಂಘಟನಾ ಕಾರ್ಯದರ್ಶಿ ಸಿದ್ದೀಖ್ ಬಿ.ಎ, ಸುಳ್ಯ ಸರ್ಕಲ್ ಪ್ರಧಾನ ಕಾರ್ಯದರ್ಶಿ ನೌಷಾದ್ ಕೆರೆಮೂಲೆ, ಸಾಂತ್ವನ ಕಾರ್ಯದರ್ಶಿ ಹಾರಿಸ್ ಬೋರುಗುಡ್ಡೆ, ಗಾಂಧಿನಗರ ಯೂನಿಟ್ ಅಧ್ಯಕ್ಷರಾದ ಅಬ್ದುಲ್ ಕಾದರ್ ಆಲೆಟ್ಟಿ, ಎಸ್ಸೆಸ್ಸಫ್ ಡಿವಿಷನ್ ಪ್ರಧಾನ ಕಾರ್ಯದರ್ಶಿ ಶಮೀರ್ ಡಿ.ಎಚ್ಹೆಚ್, ಸಾಬಿತ್ ಎಲಿಮಲೆ, ಶಿಹಾಬ್ ಫಾಳಿಲಿ, ಶರೀಫ್ ಜಯನಗರ, ಆಬಿದ್ ಕಲ್ಲುಮುಟ್ಲು, ಸಾಲಿಹ್ ಕಟ್ಟೆಕಾರ್ಸ್, ಹನೀಫ್ ಆಲ್ಫಾ, ಸಾದಿಕ್ ಮಾಂಬ್ಲಿ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಎಸ್ಸೆಸ್ಸಫ್ ಸುಳ್ಯ ಡಿವಿಷನ್ ಅಧ್ಯಕ್ಷರಾದ ರಿಯಾನ್ ಸಅದಿ ಬೆಳ್ಳಾರೆ ವಂದಿಸಿದರು.

Leave a Reply

Your email address will not be published. Required fields are marked *