ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಕೊರತೆಯನ್ನು ನೀಗಿಸುವ ಮಹತ್ಕಾರ್ಯ ಎಸ್ಸೆಸ್ಸೆಫ್ ನಿಂದ ನಡೆಯುತ್ತಿದೆ: ಮುಸ್ತಫಾ ಕೆ ಎಂ
ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ವತಿಯಿಂದ ಯೆನೆಪೋಯ ಆಸ್ಪತ್ರೆ ಮಂಗಳೂರು ಸಹಭಾಗಿತ್ವದಲ್ಲಿ ಎಸ್ಸೆಸ್ಸೆಫ್ ಕರ್ನಾಟಕ ಬ್ಲಡ್ ಸೈಬೋ ಇದರ 356ನೇ ರಕ್ತದಾನ ಶಿಬಿರವು ದಿನಾಂಕ 13.07.2025 ರಂದು ಸುಳ್ಯದ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿ ಯಶಸ್ವಿಯಾಗಿ ನಡೆಯಿತು.
ಅಬ್ದುರ್ರಹ್ಮಾನ್ ಸಅದಿ ದುಆದ ಮೂಲಕ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಮುಸ್ತಫಾ ಕೆ ಎಂ ಉದ್ಘಾಟಿಸಿ ಮಾತನಾಡಿ ‘ಇತ್ತೀಚೆಗೆ ವರದಿಯಾಗುತ್ತಿರುವ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಕೊರತೆಯನ್ನು ನೀಗಿಸುವ ಮಹತ್ಕಾರ್ಯ ಎಸ್ಸೆಸ್ಸೆಫ್ ನಿಂದ ನಡೆಯುತ್ತಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಲಾಗುತ್ತದೆ. ಸಾತ್ವಿಕ ಪರಂಪರೆಯನ್ನು ಹೊಂದಿರುವ ಎಸ್ಸೆಸ್ಸೆಫ್ ಕಾರ್ಯಕರ್ತರು ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳಲ್ಲಿ ಏರ್ಪಡದ ಕಾರಣದಿಂದಲೇ ಅವರ ಮೇಲೆ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಚರಿತ್ರೆಯಿಲ್ಲ’ ಎಂದರು. ಎಸ್ ಎಂ ಎ ಸುಳ್ಯ ರೀಜನಲ್ ಅಧ್ಯಕ್ಷರಾದ ಹಮೀದ್ ಸುಣ್ಣಮೂಲೆ, ಯೆನೆಪೋಯ ಆಸ್ಪತ್ರೆಯ ವೈದ್ಯರಾದ ಡಾ. ಜುರೆಲ್ ಶುಭನುಡಿಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ಝೋನ್ ಅಧ್ಯಕ್ಷರಾದ ಹಮೀದ್ ಬೀಜಕೊಚ್ಚಿ, ಸದಸ್ಯರಾದ ಸಿದ್ದೀಕ್ ಕಟ್ಟೆಕಾರ್, ಸುಳ್ಯ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಹಮೀದ್ ಕುತ್ತಮೊಟ್ಟೆ, ಅನ್ಸಾರ್ ಕಾಂಪ್ಲೆಕ್ಸ್ ಅಧ್ಯಕ್ಷರಾದ ಅಬ್ದುಲ್ಲಾ ಕಟ್ಟೆಕಾರ್, ಉದ್ಯಮಿಗಳಾದ ನಾಸಿರ್ ಕಟ್ಟೆಕಾರ್, ಫೈಝಲ್ ಕಟ್ಟೆಕಾರ್, ಹನೀಫ್ ಅಲ್ಫಾ, ಎಸ್ ವೈ ಎಸ್ ನ ನೌಶಾದ್ ಕೆರೆಮೂಲೆ, ಸಿದ್ದೀಕ್ ಬಿ ಎ, ಸಮೀರ್ ಮೊಗರ್ಪಣೆ, ಆರಿಸ್ ಬೋರುಗುಡ್ಡೆ ಸಹಿತ ಹಲವಾರು ರಕ್ತದಾನಿಗಳು, ಧಾರ್ಮಿಕ, ಸಾಮಾಜಿಕ ಮುಖಂಡರು, ಸಂಘಟನಾ ನಾಯಕರು, ಕಾರ್ಯಕರ್ತರು ಭಾಗವಹಿಸಿದರು.
ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಬ್ಲಡ್ ಉಸ್ತುವಾರಿಗಳಾದ ಶರೀಫ್ ಜಯನಗರ, ಆಬಿದ್ ಕಲ್ಲುಮುಟ್ಲು, ಡಿವಿಷನ್ ಪ್ರಧಾನ ಕಾರ್ಯದರ್ಶಿ ಸೆಮೀರ್ ಡಿ ಹೆಚ್ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸಿಕೊಟ್ಟರು. ಸ್ವಾದಿಕ್ ಕಲ್ಲುಗುಂಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷರು ಧನ್ಯವಾದ ಸಲ್ಲಿಸಿದರು.


