ಸುಳ್ಯದ ಬಿಜೆಪಿಯವರಿಗೆ ಪ್ರತಿಭಟನೆಯ ಹುಚ್ಚು. ಅದು ನಗರಾಡಳಿತ, ಜಿಲ್ಲಾಡಳಿತ, ವಿಧಾನಸಭೆ, ಲೋಕಸಭೆ ಎಲ್ಲವೂ ಅವರದೇ ಬಿಜೆಪಿ ಪಕ್ಷದ ಆಡಳಿತ ಇದ್ದಾಗಲೂ ಪ್ರತಿಭಟನೆ. ಒಟ್ಟಿನಲ್ಲಿ ಪ್ರತಿಭಟನೆ ಮಾಡುವುದು, ಅಲ್ಲಿ ಒಂದಿಷ್ಟು ಅಮಾಯಕರನ್ನು ಸೇರಿಸಿ ಪ್ರಚೋದನಕಾರಿ ಭಾಷಣ ಮಾಡುವುದು, ಕಾಂಗ್ರೆಸ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ಅವರಿವರನ್ನು ಕೆರಳಿಸುವುದು. ಇದಿಷ್ಟು ಅವರ ದೈನಂದಿನ ಸಂಗತಿಗಳು. ಇಂದು ಕೆಂಪು ಕಲ್ಲು ಮತ್ತು ಮರಳು ವಿಚಾರವಾಗಿ ಭಾರತೀಯ ಮಜ್ದೂರ್ ಸಂಘ ದ ಹೆಸರಿನಲ್ಲಿ ಪ್ರತಿಭಟನೆ. ಅಲ್ಲಿ ಅವರು ಪ್ರತಿಭಟನೆ ಮಾಡಲು ಮಾತ್ರ ಅವಕಾಶ ಅನುಮತಿ ಇರುವುದು. ಆದರೆ ಅವರು ಅಲ್ಲಿ ಪ್ರತಿಭಟನೆ ಹೆಸರಲ್ಲಿ ಮಾಡಿದ್ದೇನು? ಸುಳ್ಯ ಕಾಂಗ್ರೆಸ್ ಕುರಿತು, ಅಶೋಕ್ ರೈ ಕುರಿತು ವಾಚಾಮಗೋಚರವಾಗಿ ಮಾತನಾಡಿದರೆ ನಾವೇನು ಇವರ ಬೀದಿ ನಾಟಕ ನೋಡಿ ಸುಮ್ಮನೆ ಕೂರುತ್ತೇವೆ ಅಂದುಕೊಳ್ಳುವುದು ಬೇಡ. ಅಶೋಕ್ ಕುಮಾರ್ ರೈ ಯವರಿಗೆ ಇವರು ಯಾವ ದಿಗ್ಬಂಧನ ಹಾಕುತ್ತಾರೆ ನೋಡೇ ಬಿಡೋಣ. ನಾವು ಇದೇ ಬಿಜೆಪಿಗರ ಮುಂದೆ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈಯವರನ್ನು ಕರೆತಂದು ಸುಳ್ಯದಲ್ಲಿ ಬಹಿರಂಗ ಮೆರವಣಿಗೆ ಮಾಡಲಿದ್ದೇವೆ. ಅದೇನು ದಿಗ್ಬಂಧನ ನೋಡಿಯೇ ಬಿಡೋಣ.
ಕಾಂಗ್ರೆಸ್ ನ ಕೈ ತುಂಡಾಗಿದೆ ಹೇಳಿದ್ದಾರೆ, ಬೀದಿಗಳಲ್ಲಿ ಕಾಂಗ್ರೆಸ್ಸಿಗರಿಗೆ ಹೊಡೆಯುವ ದಿನ ಬರಲಿದೆ ಎಂದು ಭಯೋತ್ಪಾದಕಾ ರೀತಿಯ ಮಾತುಗಳನ್ನು ಹೇಳಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಪಕ್ಷ ಬೇಧವಿಲ್ಲದೆ ಜನಸಾಮಾನ್ಯರಿಗೆ ನೆರವು ನೀಡುತ್ತಿರುವುದು ಕಾಂಗ್ರೆಸ್ಸಿಗರು. ಅವೈಜ್ಞಾನಿಕ ಮತ್ತು ಅಕ್ರಮ ಗಣಿಗಾರಿಕೆ ತಡೆಗಟ್ಟಲು ರಾಜ್ಯ ಸರ್ಕಾರ ಇದೀಗ ಹೊಸ ಕಾನೂನು ಮಾರ್ಪಾಡು ಮಾಡುತ್ತಿದೆ. ಇನ್ನು ಕೆಲವು ದಿನಗಳಲ್ಲಿ ಕಾನೂನಾತ್ಮಕವಾಗಿ ಕೆಂಪು ಕಲ್ಲು ಮತ್ತು ಮರಳು ಜನಸಾಮಾನ್ಯರಿಗೆ ನಿರ್ದಿಷ್ಟ ದರದಲ್ಲಿ ಒದಗಿಸಲು ಅನುಕೂಲವಾಗುವಂತೆ ಸಭೆ ನಡೆಸಲಾಗುತ್ತಿದೆ. ಆ ನಿಟ್ಟಿನಲ್ಲಿ ಪುತ್ತೂರು ಶಾಸಕ ಶ್ರೀ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಶ್ರೀ ಮಂಜುನಾಥ ಭಂಡಾರಿ, ವಿಧಾನಸಭಾ ಅಧ್ಯಕ್ಷರು, ಮಾಜಿ ಮಂತ್ರಿಗಳಾದ ರಮಾನಾಥ ರೈ ಗಳು ಮತ್ತು ಜಿಲ್ಲೆಯ ನಾಯಕರು ಮುಖ್ಯಮಂತ್ರಿಯವರನ್ನು, ಉಪಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಅಧಿಕಾರಿಗಳೊಂದಿಗೆ ಈ ಕುರಿತು ಶಾಶ್ವತ ಪರಿಹಾರದ ಯೋಜನೆ ರೂಪಿಸುತ್ತಿದ್ದಾರೆ. ಇಷ್ಟೆಲ್ಲಾ ನಡೆಸಿರುವಾಗ ಇಲ್ಲಿ ಈಗ ಪ್ರತಿಭಟನೆ ಅನವಶ್ಯಕ. ಪ್ರತಿಭಟನೆ ಅವರಿಗೆ ಕಾಂಗ್ರೆಸ್ ಗೆ ಬಯ್ಯುವ ವೇದಿಕೆ, ಅದರೆ ಮಿತಿಮೀರಿದ ನಾಲಿಗೆ ಹರಿ ಬಿಟ್ಟಿರುವುದು, ಶಾಂತಿ ಕದಡುವ ಪ್ರಯತ್ನ ಕ್ಕೆ ಕಡಿವಾಣ ಹಾಕಬೇಕು. ಅದಕ್ಕಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ದೂರು ನೀಡಿದ್ದೇವೆ ಎಂದು ಜಿಲ್ಲಾ ಕಾಂಗ್ರೆಸ್ ನ ಕಾರ್ಯದರ್ಶಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮಾಧ್ಯಮ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *