ಹೊರ ರಾಷ್ಟ್ರದಲ್ಲಿ ನಮ್ಮೂರಿನ ಮಹಿಳೆಯೊಬ್ಬಳು ಗಲ್ಲಿಗೇರಲು ನಿಮಿಷಗಳು ಮಾತ್ರ ಬಾಕಿ ಇರುವಾಗ, ಪರಿಹಾರವಾಗಿ ಕಾಣಿಸಿಕೊಂಡದ್ದು ಕೇಂದ್ರ ಸರ್ಕಾರವಲ್ಲ, ರಾಜ್ಯ ಸರ್ಕಾರವೂ ಅಲ್ಲ. ಆ ದಕ್ಷಿಣೆಯಿಂದ ಬೆಳಗಿನ ಕಿರಣದಂತೆ ಬಂದದ್ದು ನಮ್ಮೆಲ್ಲರ ಸುನ್ನೀ ನಾಯಕ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ — ಗ್ರಾಂಡ್ ಮುಫ್ತಿ ಆಫ್ ಇಂಡಿಯಾ ಅವರೇ.

ಜೀವದ ಪ್ರಶ್ನೆ ಬಂದಾಗ ಅವರು ಯಾವುದೇ ಜಾತಿ, ಧರ್ಮ, ಮತ ಅಥವಾ ಪಂಗಡವನ್ನು ನೋಡಲಿಲ್ಲ.
ಅವರಿಬ್ಬರ ನಡುವೆ ರಾಜಕೀಯ ಅಥವಾ ಕುಟುಂಬ ಸಂಬಂಧವೂ ಇರಲಿಲ್ಲ. ಇವರು ಯಾವುದೇ ರಾಜಕೀಯ ಪಕ್ಷದ ನಾಯಕನಲ್ಲ, ಸಚಿವನಲ್ಲ, ಸಭೆಯ ಅಧ್ಯಕ್ಷನಲ್ಲ, ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿಯೂ ಅಲ್ಲ.

ಆದರೂ ಅವರು ಮಾಡಿದ ಮಾನವೀಯ ಕಾರ್ಯವು ಎಲ್ಲರ ಹೃದಯವನ್ನೂ ಮುಟ್ಟಿದೆ.
ಅಲ್ಲಾಹನು ಇಂತಹ ಮಹಾನ್ ನಾಯಕನಿಗೆ ದೀರ್ಘಾಯುಷ್ಯ ನೀಡಲಿ. ಆಮೀನ್.
–ಮಹಮ್ಮದ್ ಸವಾದ್ ಎ ಪಿ

Leave a Reply

Your email address will not be published. Required fields are marked *