Nammasullia:
ನಿಧನ: ಗೂನಡ್ಕ ತೆಕ್ಕಿಲ್ ಚೆರೂರ್ ಬೀಫಾತಿಮ (70)
ಸುಳ್ಯ,ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕ ಮೋಹಿಯದ್ದಿನ್ ಜುಮಾ ಮಸೀದಿ ಜಮಾಅತ್ ಗೆ ಒಳಪಟ್ಟ ಗೂನಡ್ಕ ದಿವಂಗತ ಚೆರೂರ್ ಮೊಹಮದ್ ಕುಂಞಿ ಹಾಗು ದಿವಂಗತ ಗೂನಡ್ಕ ತೆಕ್ಕಿಲ್ ದೈನಾಬಿ ಅವರ ಪುತ್ರಿ ಬೀಫಾತಿಮಾ ಎಪ್ಪತ್ತು ವರ್ಷ ಅಲ್ಪ ಕಾಲದ ಅಸೌಖ್ಯದಿಂದ ಇಂದು ಗೂನಡ್ಕದ ಮನೆಯಲ್ಲಿ ನಿಧನರಾದರು.
ಪತಿ ದಿವಂಗತ ಗೂನಡ್ಕ ಮಹಮದ ಕುಂಞಿ,ಪುತ್ರರಾದ ಜಿ ಎಂ ಅಬ್ದುಲ್ಲ ಕುಂಞಿ ಗೂನಡ್ಕ, ಜಿ ಎಂ ಅಬ್ಬಾಸ್ ಪೆರಾಜೆ, ಜಿ ಎಂ ಉಮ್ಮರ್ ಬೆಳ್ಳಾರೆ, ಜಿ ಎಂ ಅಮೀರ್ ಗೂನಡ್ಕ, ಪುತ್ರಿಯರಾದ ಜಿ ಎಂ ಆಯಿಷಾ ಕೋಂ ಇಬ್ರಾಹಿಂ ನಡುಬೈಲ್ ಗೂನಡ್ಕ, ಜಿ ಎಂ ಮಿಸಿರಿಯಾ ಕೋಂ ಜಬ್ಬಾರ್ ಸಖಾಫಿ ಅಜ್ಜಾವರ, ಜಿ ಎಂ ಫೌಝಿಯ ಕೋಂ ಲತೀಫ್ ಸಂಪಾಜೆ ಸಹೋದರರಾದ ಅಬ್ಬಾಸ್ ಚೆರೂರ್ ಸುಳ್ಯ, ಇಬ್ರಾಹಿಂ ಚೆರೂರ್ ಗೂನಡ್ಕ,ಮೂಸನ್ ಚೆರೂರ್ ಗೂನಡ್ಕ, ಮೊಯಿದೀನ್ ಚೆರೂರ್ ಸುಳ್ಯ,ಅಬ್ದುಲ್ಲ ಚೆರೂರ್ ನೆಲ್ಲಿಕಟ್ಟೆ ಮತ್ತು ದಿವಂಗತ ಅಬ್ದುಲ್ ರಹಮಾನ್ ಚೆರೂರ್ ಗೂನಡ್ಕ ಸಹಿತ ಮೊಮ್ಮಕ್ಕಳು ಅಪಾರ ಕುಟುಂಬಸ್ಥರನ್ನು ಬಿಟ್ಟು ಅಗಲಿದ್ದಾರೆ, ಇಂದು ಮಧ್ಯಾಹ್ನ ಪೇರಡ್ಕ ಜುಮ ಮಸ್ಜಿದ್ ನಲ್ಲಿ (ಅಂತ್ಯಕ್ರಿಯೆ) ದಫನ ನಡೆಯಲಿದೆ.


