ಕೊಕ್ಕಡ ಸಮೀಪದ ಸೌತಡ್ಕ ಗುಂಡಿ ಎಂಬಲ್ಲಿ ಗೇರು ಪ್ಲಾಂಟೇಶನ್ನಲ್ಲಿ ಬೆಳ್ಳಂಬೆಳ್ಳಗೆ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿರುವ ಘಟನೆ ಬಗ್ಗೆ ವರದಿಯಾಗಿದೆ.ಈ ವೇಳೆ ಅದನ್ನು ಓಡಿಸುವ ಸಂದರ್ಭದಲ್ಲಿ ಓರ್ವ ವ್ಯಕ್ತಿಗೆ ಆನೆಯು ಸೊಂಡಿಲಿನಿಂದ ತಿವಿದು ಗಂಭೀರ ಗಾಯಗೊಳಿಸಿದ್ದು ಅವರು ಮೃತಪಟ್ಟ ಘಟನೆ ಜು. 17ರಂದು ನಡೆದಿದೆ.
ಮೃತ ವ್ಯಕ್ತಿ ಸೌತಡ್ಕದ ನಿವಾಸಿ ಬಾಲಕೃಷ್ಣ ಶೆಟ್ಟಿ ಎಂದು
ತಿಳಿದುಬಂದಿದೆ.ಅವರು ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.ಮೃತರು ಪತ್ನಿ , ಇಬ್ಬರು ಹೆಣ್ಣು ಮತ್ತು ಒಬ್ಬ ಗಂಡು ಮಕ್ಕಳನ್ನು ಅಗಲಿದ್ದಾರೆ.


