ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿಗಳಾಗಿದ್ದ ನಮ್ಮನ್ನಗಲಿದ ಮರ್ಹೂಂ ಖುರ್ರತುಸ್ಸಾದಾತ್ ಕೂರತ್ ತಂಙಳ್ ರವರ ಅನುಸ್ಮರಣೆ ತಹ್ಲೀಲ್, ಹಾಗೂ ದುಆಃ ಮಜ್ಲಿಸ್ ಇದೇ ಬರುವ ಆಗಸ್ಟ್ 01 ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಮಗ್ರಿಬ್ ನಮಾಝ್ ಬಳಿಕ ಪೈಚಾರ್ ಮಸೀದಿಯಲ್ಲಿ ನಡೆಯಲಿದೆ. ದುಅ ಹಾಗೂ ಅನುಸ್ಮರಣಾ ಪ್ರಭಾಷಣವನ್ನು ಬಹುಮಾನ್ಯರಾದ ಸೆಯ್ಯಿದ್ ಮುಹ್ಸಿನ್ ಸೈದಲವಿ ಕೋಯ ಅಲ್ ಬುಖಾರಿ ಕುಂಜಿಲಂ ತಂಙಳ್ ರವರು ನಿರ್ವಹಿಸಲಿದ್ದಾರೆ. ಸ್ವಲಾತ್ ನೇತೃತ್ವವನ್ನು ಬಹು: ಶಮೀರ್ ಅಹ್ಮದ್ ನಹೀಮಿ (ಖತೀಬ್ ಬಿ ಜೆ ಎಂ ಪೈಚಾರ್) ವಹಿಸಲಿದ್ದಾರೆ. ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸ್ಥಳ ಸೌಕರ್ಯವಿದೆ, ಕಾರ್ಯಕ್ರಮದ ಕೊನೆಯಲ್ಲಿ ಸೀರಣಿ ವಿತರಣೆ ನಡೆಯಲಿದೆ ಎಂದು ಅಲ್-ಅಮೀನ್ ಯೂತ್ ಸೆಂಟರ್ (ರಿ) ಪೈಚಾರ್ ಇದರ ಸಂಘಟಕರು ತಿಳಿಸಿದ್ದಾರೆ.