ಸುಳ್ಯ: ಇಲ್ಲಿನ ಪೈಚಾರ್ ಎಂಬಲ್ಲಿ ವಿದ್ಯುತ್ ತಂತಿಯು ಮರಕ್ಕೆ ತಗುಲಿ ಶಾರ್ಟ್ ಸರ್ಕ್ಯೂಟ್ ಆಗಿ ಹೊತ್ತಿಹೊರಿದಿದೆ. ಪೈಚಾರಿನಲ್ಲಿ ವಿದ್ಯುತ್ ತಂತಿ ಮರದ ಕೊಂಬೆ, ಎಲೆಗಳಿಗೆ ಸ್ಪರ್ಶಿಸಿ ಶಾರ್ಟ್ ಸರ್ಕ್ಯೂಟ್ ಆಗಿ, ದೀಪಾವಳಿಯ ನೆನಪು ಮೆಲುಕು ಹಾಕುವಂತೆ ಮಾಡಿದೆ. ಇದನ್ನು ಕಂಡ ಸಾರ್ವಜನಿಕರು ಈ ವಿಡಿಯೋ ರೆಕಾರ್ಡ್ ಮಾಡಿ, “ಇಲ್ಲಿ ನೋಡಿ ಪೈಚಾರಿನಲ್ಲಿ, ದೀಪಾವಳಿ ಹಾಗೆ ಆಗ್ತಾಯಿದೆ, ಸುಳ್ಯದ ಕೆ.ಇ.ಬಿ ಯವರ ಹಣೆಬರಹ ನೋಡಿ, ಇದನ್ನೊಂದು ಸರಿಪಡಿಸಲು ಆಗುತ್ತಿಲ್ಲ” ಹೀಗೆ ಅಧಿಕಾರಿಗಳನ್ನು ಕೂಡಾ ತರಾಟೆಗೆ ತೆಗೆದುಕೊಂಡು ಅದರ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಈಗಿನ ಮಳೆಯಿಂದಾಗಿ ಅಲ್ಲಲ್ಲಿ ಮರ ಗಿಡಗಳು ಬಿದ್ದು ವಿದ್ಯುತ್ ವ್ಯತ್ಯಯ ಆಗುವುದು ಸರ್ವೇ ಸಾಮಾನ್ಯ, ಹೀಗಿರುವಾಗ ಇರುವ ವಿದ್ಯುತ್ ತಂತಿಗಳನ್ನು ಸಮರ್ಪಕವಾಗಿ ಉಪಯುಕ್ತ ರೀತಿಯಲ್ಲಿ ಇಟ್ಟುಕೊಳ್ಳಬೇಕೆಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.