ಗುಡ್ಡ ಕುಸಿದು ಮನೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದಾಗ ಪುಟ್ಟ ಮೊಮ್ಮಗಳನ್ನು ಹಿಡಿದು ಈಜುತ್ತಾರೆ 60-70ರ ಪ್ರಾಯದ ಆ ವೃದ್ಧೆ, ಹೇಗಾದರೂ ಜೀವ ರಕ್ಷಣೆ ಮಾಡಬೇಕು ಆ ಕತ್ತಲಿನಲ್ಲಿ ಸಾಗಿದಾಗ ಅವರಿಗೊಂದು ದಿಣ್ಣೆ ಸಿಗುತ್ತದೆ ( ಸ್ವಲ್ಪ ಎತ್ತರದ ಪ್ರದೇಶ)ಅದನ್ನೇರಿ ನೋಡಿದರೆ ಎದುರಿನಲ್ಲಿ ಕಾಡಾನೆ, ಒಂದು ಕಡೆಯಿಂದ ಪ್ರಾಣ ರಕ್ಷಣೆ ಮಾಡಿ ಬಂದರೆ ಮತ್ತೊಂದೆಡೆ ಒಂಟಿ ಸಲಗ, ಆದರೆ ಮುಂದೆ ನಡೆದಿದ್ದು ಅವರ ಬದುಕಿನಲ್ಲಿ ಎಂದೆಂದಿಗೂ ಮರೆಯಲಾಗದ ಪವಾಡ, ಇದೀಗ ಅವರು ಹೇಳಿದ ಆ ಕತೆ ಎಲ್ಲೆಡೆ ವೈರಲ್ ಆಗುತ್ತಿದೆ.

ಕಾಡಾನೆ ಎಂದರೆ ಯಾರಿಗೆ ತಾನೆ ಭಯವಾಗಲ್ಲ, ಆನೆ ಪಳಗಿಸಿದ ಮೇಲೆಷ್ಟೇ ಮನುಷ್ಯನ ಭಾಷೆ ಅರ್ಥ ಆಗುತ್ತೆ, ಅದೇ ಕಾಡಾನೆ ಮನುಷ್ಯನನ್ನು ಕಂಡ ತಕ್ಷಣ ತುಳಿದು ಕೊಂದು ಬಿಡುತ್ತದೆ, ಏಕೆಂದರೆ ನಮಗೆ ಕಾಡಾನೆಯನ್ನು ನೋಡಿದಾಗ ಎಷ್ಟು ಭಯವಾಗುತ್ತೋ ಮನುಷ್ಯನನ್ನು ನೋಡಿದಾಗ ಕಾಡಾನೆಗೂ ಅಷ್ಟೇ ಭಯವಾಗುತ್ತೆ, ನಮ್ಮಿಂದ ಅದಕ್ಕೆ ತೊಂದರೆಯಾಗಬಹುದು ಎಂದು ಗಾಬರಿಯಾಗಿ ಮನುಷ್ಯನ ಮೇಲೆ ದಾಳಿ ಮಾಡುತ್ತೆ. ಆದರೆ ಈ ಕಾಡಾನೆಗೆ ಅ ಮಹಿಳೆ ಹೇಳಿದ್ದು ಅರ್ಥವಾಯ್ತಾ ಗೊತ್ತಿಲ್ಲ, ಆದರೆ ಕಣ್ಣೀರು ಅರ್ಥವಾಯ್ತು. ಗುಡ್ಡ ಕುಸಿದು ಕೆಸರು ನೀರು ಉಕ್ಕಿ ಬರಲಾರಂಭಿಸಿದಾಗ ಮಹಿಳೆಗೆ ಏನು ಮಾಡಬೇಕೆಂದು ಗೊತ್ತಾಗುವುದಿಲ್ಲ, ಅವರು ಇದ್ದ ಮನೆ ಒಂದೊಂದು ಕಡೆ ಕುಸಿದು ಬಿತ್ತು ಆ ಸಮಯದಲ್ಲಿ ಮನೆಯ ಅಡುಗೆ ಮನೆಯೆಲ್ಲ ಗೋಡೆ ಕುಸಿದಾಗ ಅದರ ಮೂಲಕ ಮನೆಯಿಂದ ಹೊರ ಬರಲು ಯೋಚಿಸುತ್ತಾರೆ, ಆವಾಗ ಮೊಮ್ಮಗಳು ಅಜ್ಜಿ ನಾನೂ ಇದ್ದೀನಿ ಅಂತಾಳೆ, ಆವಾಗ ಅಜ್ಜಿಗೆ ಮೊಮ್ಮಗಳಿಗೆ ಏನೂ ಆಗಲಿಲ್ಲ ಎಂಬ ಸಮಧಾನವಾಗುತ್ತೆ, ಅವಳ ಕಿರುಬೆರಳು ಸಿಗುತ್ತೆ, ಅವಳನ್ನು ಮೇಲಕ್ಕೆತ್ತಿ,

ಆ ಮಗುವಿನ ತಾಯಿಗೆ ಆರೋಗ್ಯ ಸರಿಯಿರಲ್ಲ, ಆ ಮಗಳನ್ನೂ ಕರೆದುಕೊಂಡು ಈಜುತ್ತಾರೆ. ಮಗಳು-ಮೊಮ್ಮಗಳನ್ನು ಈಜುತ್ತಾ ಜೊತೆಗೆ ಕೊಂಡೊಯ್ಯುವುದು ಅಷ್ಟು ಸುಲಭವಲ್ಲ, ಆದರೆ ನಿಂತರೆ ಜೀವ ಉಳಿಯಲ್ಲ, ಹಾಗಾಗಿ ಪ್ರಾಣಭಯದಿಂದ ಈಜಲು ಪ್ರಾರಂಭಿಸುತ್ತಾರೆ, ಹೀಗೆ ಈಜುತ್ತಾ ಸಾಗಿದಾಗ ಸ್ವಲ್ಪ ಎತ್ತರದ ಭೂಮಿ ಕಾಣುತ್ತೆ, ಆ ಕತ್ತಲಿನಲ್ಲಿ ಎಲ್ಲವೂ ಅಸ್ಪಷ್ಟ, ಅಬ್ಬಾ ಜೀವ ಬಾಕಿಯಾಯ್ತಲ್ಲ ಎಂದು ನೋಡುವಾಗ ಎದುರುಗಡೆ ಕಾಡಾನೆ. ಇವರು ಏನು ಮಾಡಬೇಕೆಂದು ತೋಚಲಿಲ್ಲ, ಇವರುಗಳ ಕಣ್ಣಿನಲ್ಲಿ ಧಾರಾಕಾರ ಕಣ್ಣೀರು , ಕೈ ಮುಗಿದು ಆ ಆನೆಗೆ ಹೇಳುತ್ತಾರೆ, ಒಂದು ದೊಡ್ಡ ದುರ್ಘಟನೆಯಿಂದ ಪಾರಾಗಿ ಇಲ್ಲಿಗೆ ಬಂದಿದ್ದೇವೆ ನಮ್ಮನ್ನು ಏನೂ ಮಾಡಬೇಡ, ಆ ಆನೆ ನಿಂತ ಜಾಗದಿಂದ ಒಂದಿಂಚೂ ಕದಲಿಲ್ಲ, ನೋಡಿದರೆ ಆನೆಯೂ ಅಳುತ್ತಿದೆ, ಜೋರಾಗಿ ಮಳೆ ಸುರಿಯುತ್ತಿತ್ತು, ನಮ್ಮನ್ನು ರಕ್ಷಣೆ ಮಾಡಲು ನಮ್ಮ ಊರಿನಲ್ಲಿ ಯಾರೂ ಉಳಿದಿಲ್ಲ, ಬೇರೆಯವರು ಬಂದು ರಕ್ಷಣೆ ಮಾಡುವವರೆಗೆ ಅಲ್ಲಿಯೇ ಇರಬೆಕಾಗಿತ್ತು, ಆ ಆನೆಯ ಕಾಲು ಬುಡದಲ್ಲಿಯೇ ಇವರು ಮಲಗಿದರೂ ಆನೆ ಏನೂ ಮಾಡದೆ ರಕ್ಷಣೆ ನೀಡಿತ್ತು, ಇದೀಗ ಈ ಮಹಿಳೆ ತಮ್ಮ ಅನುಭವದ ಬಗ್ಗೆ ಹೇಳಿದಾಗ ಇದನ್ನು ಕೇಳಿದವರಿಗೂ ಅಚ್ಚರಿ, ಈಗ ಇವರು ಆನೆಯ ಬಗ್ಗೆ ಹೇಳಿದ ಮಾತುಗಳು ವೈರಲ್ ಅಗುತ್ತಿದೆ.

Leave a Reply

Your email address will not be published. Required fields are marked *