ಸುಳ್ಯ: ಹೆಚ್ಚುತ್ತಿದೆ ನಕಲಿ ಜ್ಯೋತಿಷ್ಯರ ಹಾವಳಿ ಸುಳ್ಯದ ಪ್ರಮುಖ ಯುಟ್ಯೂಬರ್ ಒಬ್ಬರ ವಿಡಿಯೋ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಸುಳ್ಯದ ಪ್ರಮುಖ ಯುಟ್ಯೂಬರ್ ವಿಜೆ ವಿಖ್ಯಾತ್ ಎಂಬುವವರು ತಮ್ಮ ಯುಟ್ಯೂಬ್ ನಲ್ಲಿ ಆರಿಕೋಡಿ ಕ್ಷೇತ್ರದ ಕುರಿತು ಒಂದು ವಿಡಿಯೋ ಹಾಕಿದ್ದರು, ಆ ವಿಡಿಯೋದ ಕೆಲ ಭಾಗವನ್ನು ಕತ್ತರಿಸಿ, ಜ್ಯೋತಿಷಿಗಳು ತಮ್ಮಲ್ಲಿ ನಡೆದ ಪವಾಡ ಪ್ರತಿಬಿಂಬಿಸುವಂತೆ ಹಂಚಿಕೊಂಡಿದ್ದರು, ಈ ವಿಡಿಯೋದ ನಿಜಾಂಶ ತಿಳಿಯಲು ಯುಟ್ಯೂಬರ್ ವಿಜೆ ವಿಖ್ಯಾತ್ ಅವರು ನಕಲಿ ವಿಡಿಯೋ ಸೃಷ್ಟಿಸಿದ ಜ್ಯೋತಷಿಗಳಿಗೆ ನೇರ ಫೋನ್ ಕರೆ ಮಾಡಿ ನಿಜಾಂಶ ಹಂಚಿಕೊಂಡಿದ್ದಾರೆ.