ಅಜ್ಜಾವರ ಮೇನಾಲ ಕಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್.ಡಿ.ಎಂ.ಸಿ ರಚನಾ ಸಭೆ ಆಗಸ್ಟ್.12ರಂದು ನಡೆಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಸೌಕತ್ ಅಲಿ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ರಶ್ಮಿತಾ ಕರ್ಕೇರ ಆಯ್ಕೆಯಾದರು. ಸಮಿತಿಯ ಸದಸ್ಯರುಗಳಾಗಿ ಬಾಲಕೃಷ್ಣ ಸಿಯಾಬ್, ಅಬ್ದುಲ್ಲ, ಮಹಮ್ಮದ್, ರಫೀಕ್, ಶರೀಫ್, ಅನಿಲ್ ಕುಮಾರ್, ಸುಮಾಲಿನಿ, ಲಕ್ಷ್ಮೀ, ಸವಿತ, ಸೌಮ್ಯ ಜಾನಿಕಿ, ಅಂಕಿತ, ಜಯಶ್ರೀ, ವೀಣಾ, ಯಶೋದಾ ಆಯ್ಕೆಯಾದರು. ಪದನಿಮಿತ್ತ ಸದಸ್ಯರಾಗಿ ಕನಕ ಎನ್.ಡಿ., ಜಯಶ್ರೀ, ದೇವಕಿ, ನಾಮನಿರ್ದೇಶನ ಸದಸ್ಯರಾಗಿ ಪ್ರಸಾದ್ ಕುಮಾರ್ ರೈ ಮೇನಾಲ, ಲತಾ ಬಿ, ಆಸೀಫ ಆಯ್ಕೆಯಾದರು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಬೇಬಿ, ಸದಸ್ಯರುಗಳಾದ ಪ್ರಸಾದ್ ಕುಮಾರ್ ರೈ ಹಾಗೂ ದೇವಕಿ ಉಪಸ್ಥಿತರಿದ್ದರು.