Month: September 2024

ಬೆಳ್ಳಾರೆ: ಫೇಸ್‌ಬುಕ್‌ ನಲ್ಲಿ ಮಸೀದಿ ಬಗ್ಗೆ ಅಪಪ್ರಚಾರ- ಖಲೀಲ್ ವಿರುದ್ಧ ಪೋಲಿಸ್ ಕೇಸ್

ಬೆಳ್ಳಾರೆ: ಬೆಳ್ಳಾರೆ ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಂಘ ಸಂಸ್ಥೆ, ಗುಂಪು, ಪಂಗಡಗಳ, ವಿರುದ್ಧ ತಕರಾರು ಎತ್ತಿ ದ್ವೇಷ ಹರಡಿ ನಿರಂತರ ತೊಡಕುಂಟು ಮಾಡುತ್ತಿರುವ, ಅಲ್ಲದೆ ಬೆಳ್ಳಾರೆ ಮಸೀದಿಯಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್…

ಸುಳ್ಯ – ಅಡ್ಕಬಳೆಯಲ್ಲಿ ಕಾಡಾನೆ ದಾಳಿಗೆ ಕೃಷಿ ನಾಶ

ಕಾಡಾನೆ ದಾಳಿ ಕೃಷಿ ನಾಶವಾದ ಘಟನೆ ಅಡ್ಕಬಳೆಯಲ್ಲಿ ಸಂಭವಿಸಿದೆ.ಗಂಗಾಧರ ಗೌಡ, ಲೀಲಾವತಿ ಎಂಬುವವರ ತೋಟಕ್ಕೆ ಆನೆ ದಾಳಿ ಮಾಡಿದ್ದು ಅಪಾರ ಪ್ರಮಾಣದ ಕೃಷಿ ನಾಶವಾಗಿದೆ ಎಂದು ತಿಳಿದುಬಂದಿದೆ. ಈ ಭಾಗದ ಸಾಮಾನ್ಯ ಸಮಸ್ಯೆ ಇದಾಗಿದ್ದು, ಅರಂತೋಡು ಗ್ರಾಮದ ಅಡ್ಕಬಳೆ ಪರಿಸರದಲ್ಲಿ ಕೃಷಿಕರ…

ಮಂಗಳೂರು : ಕುಲಶೇಖರದಲ್ಲಿ 2 ಬೈಕುಗಳ ಮಧ್ಯೆ ಅಫಘಾತ, ರಸ್ತೆಗೆಸೆಯಲ್ಪಟ್ಟ ಸವಾರನ ಮೇಲೆ ಹರಿದ ಬಸ್.

ಮಂಗಳೂರು : ಎರಡು ಬೈಕ್‌ಗಳ ಮಧ್ಯೆ ಅಪಘಾತ ಸಂಭವಿಸಿದ ವೇಳೆ ಬಸ್ಸೊಂದು ಹರಿದ ಪರಿಣಾಮ ಬೈಕೊಂದರ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಮಂಗಳೂರು ನಗರದ ಕುಲಶೇಖರ ಬಳಿ ನಡೆದಿದೆ. ಮೃತ ಬೈಕ್ ಸವಾರನನ್ನು ಚಂದನ್(20) ಎಂದು ಗುರುತಿಸಲಾಗಿದೆ. ಕುಲಶೇಖರ ಸೆಕ್ರೇಡ್…

ಮೂಡನಂಭಿಕೆಯ ಪರಮಾವಧಿ, ಶಾಲಾ ಅಭಿವೃದ್ದಿಗೆ 11 ವರ್ಷದ ವಿದ್ಯಾರ್ಥಿಯ ಬಲಿ ನೀಡಿದ ಆಡಳಿತ ಮಂಡಳಿ..!

ಹತ್ರಾಸ್ : ಶಾಲೆಯ ಏಳಿಗೆಗಾಗಿ 11 ವರ್ಷದ ವಿದ್ಯಾರ್ಥಿಯನ್ನು ಬಲಿ ನೀಡಿದ ಹೇಯಾ ಕೃತ್ಯ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿದೆ. ಹೇಯಾ ಕೃತ್ಯದಲ್ಲಿ ಭಾಗಿಯಾದ ಆರೋಪದ ಮೇಲೆ ಶಾಲೆಯ ಮಾಲಕ, ನಿರ್ದೇಶಕರು, ಪ್ರಾಂಶುಪಾಲರು ಮತ್ತು ಇಬ್ಬರು ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ. ಬಲಿಯಾದ…

ಕೊಲ್ಲಮೊಗ್ರ: ಕೆಲದಿನಗಳ ಹಿಂದೆ ಅಕಾಲಿಕ‌ ಮರಣಹೊಂದಿದ ಅಜಾತಶತ್ರು ಪೋಸ್ಟ್ ಮಾಸ್ಟರ್ ಜಬ್ಬಾರ್- ಆರ್ಥಿಕ ನೆರವು ನೀಡಿದ ಗ್ರಾಮಸ್ಥರು

ಕೊಲ್ಲಮೊಗ್ರ: ಗ್ರಾಮದ ಚಾಳೆಪ್ಪಾಡಿ (ತಂಬಿನಡ್ಕ) ಎಂಬಲ್ಲಿ ನೆಲೆಸಿದ್ದ ಪೋಸ್ಟ್ ಮಾಸ್ಟರ್ ಅಬ್ದುಲ್ ಜಬ್ಬಾರ್ ರವರು ಸೆ.13.ರಂದು ನಿಧನರಾಗಿದ್ದರು. ಅಕಾಲಿಕ ನಿಧನದಿಂದ ಆರ್ಥಿಕವಾಗಿ ಬಹಳಷ್ಟು ಸಂಕಷ್ಟದಲ್ಲಿದ್ದ ಜಬ್ಬಾರ್ ಕುಟುಂಬ ಸ್ಥಬ್ದವಾಗಿತ್ತು. ತಾನು ಬದುಕಿದ್ದಾಗ ಜಾತಿ ಧರ್ಮ ನೋಡದೇ ಇತರರ ನೋವಿನ ಜೊತೆ ಸ್ಪಂದಿಸುತ್ತಿದ್ದ…

ಎನ್ನೆಂಸಿ, ನೇಚರ್ ಕ್ಲಬ್ ವತಿಯಿಂದ “ಫಿಲ್ಲೋಕ್ರೋಮ್- ಎಲೆಗಳಿಂದ ಕಲಾತ್ಮಕತೆ” ಚಿತ್ರಪಟ ರಚನೆ ಸ್ಪರ್ಧೆ

ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ಮತ್ತು ಜೀವಶಾಸ್ತ್ರ ಪದವಿ ವಿಭಾಗಗಳ ವತಿಯಿಂದ ಸೆಪ್ಟೆಂಬರ್ 26 ಗುರುವಾರದಂದು “ಫಿಲ್ಲೋಕ್ರೋಮ್- ಎಲೆಗಳಿಂದ ಕಲಾತ್ಮಕತೆ” ವಿಷಯಕ್ಕೆ ಸಂಬಂಧಿಸಿದಂತೆ ಚಿತ್ರಪಟ ರಚನೆ ಸ್ಪರ್ಧೆ ಆಯೋಜಿಸಲಾಗಿತ್ತು. ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ ಉಪಸ್ಥಿತರಿದ್ದು ಸ್ಪರ್ಧಿಗಳಿಗೆ ಶುಭಹಾರೈಸಿದರು.ಕಾಲೇಜಿನ…

ಕಾಸರಗೋಡು : ಮೂರು ತಿಂಗಳ ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ, ಪತಿ ಅರೆಸ್ಟ್

ಮೂರು ತಿಂಗಳ ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ ಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಕಯ್ಯಾರ್ ಕನ್ನಟಿಪ್ಪಾರೆ ಶಾಂತಿಯೋಡು ನಿವಾಸಿ ಜನಾರ್ಧನ (39) ಬಂಧಿತ. ಪತ್ನಿ ಮಂಗಳೂರು ವಾಮಂಜೂರು ಪಿಲಿಕುಳ ದ ವಿಜೇತ ( 32) ಆಗಸ್ಟ್ 18…

ಸುಳ್ಯ: ನೂತನ‌ ತಹಶಿಲ್ದಾರ ಕರ್ತವ್ಯಕ್ಕೆ

ಸುಳ್ಯ ತಾಲೂಕು ನೂತನ ತಹಶೀಲ್ದಾರ್ ಆಗಿ ಕೆ ಎ ಎಸ್ ಅಧಿಕಾರಿ ಅರವಿಂದ್ ಕೆ ಎಂ ಆಗಮಿಸಿದ್ದಾರೆ . ಇವರು ಸುಳ್ಯ ತಹಶೀಲ್ದಾ‌ರ್ ಆಗಿ ಪ್ರಭಾರ ಕರ್ತವ್ಯ ನಿರ್ವಹಿಸಲಿದ್ದು, ಈ ಹಿಂದೆ ಮಂಗಳೂರು ಎಸಿ ಕಛೇರಿಯಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು…

AYC ಪೈಚಾರ್ ಇದರ ವತಿಯಿಂದ ಸಾಮೂಹಿಕ ಸುನ್ನತ್ ಕಾರ್ಯಕ್ರಮ

ಸುಳ್ಯ: ಅಲ್-ಅಮೀನ್ ಯೂತ್ ಸೆಂಟರ್ (ರಿ)ಪೈಚಾರ್ ಇದರ ವತಿಯಿಂದ ಸಾಮೂಹಿಕ ಸುನ್ನತ್ (ಮುಂಜಿ) ಕಾರ್ಯಕ್ರಮ ಇದೇ ಬರುವ ಅಕ್ಟೋಬರ್ 06 ರಂದು ಖುವ್ವತುಲ್ ಇಸ್ಲಾಂ ಮದರಸ ಪೈಚಾರ್ ನಲ್ಲಿ ಬೆಳಗ್ಗೆ 8:00 ಗಂಟೆಯಿಂದ ಆರಂಭಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪುತ್ತೂರು – ತಾಲೂಕು ಕಚೇರಿ ಚುನಾವಣಾ ಶಾಖೆಯ FDA ಹೃದಯಾಘಾತದಿಂದ ನಿಧನ

ಪುತ್ತೂರು ಸೆಪ್ಟೆಂಬರ್ 26: ಪುತ್ತೂರು ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಕನಕರಾಜ್ ಸೆ.25ರಂದು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬುಧವಾರ ರಾತ್ರಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಕೂಡಲೇ ಆಸ್ಪತ್ರೆಗೆ ಕರೆತರಲಾಗಿದ್ದರೂ ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.…