ಪೈಚಾರ್: ಅಸ್ತ್ರ ಸ್ಪೋರ್ಟ್ಸ್ ವತಿಯಿಂದ 78ನೇ ಸಂಭ್ರಮದ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಪಿ.ಎಂ ಕಾಂಪ್ಲೆಕ್ಸ್ ಮುಂಭಾಗ ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಾಲ್ಸೂರು ಗ್ರಾ.ಪಂ ಸದಸ್ಯ ಮುಜೀಬ್ ನೆರವೇರಿಸಿದರು. ಧ್ವಜಾರೋಹಣವನ್ನು ಕ್ಲಬ್ ನ ಗೌರವಾಧ್ಯಕ್ಷ ಶಾಫಿ ಪ್ರಗತಿ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸ್ತ್ರ ಸ್ಪೋರ್ಟ್ಸ್ ಇದರ ಅಧ್ಯಕ್ಷ ರಿಫಾಯಿ ವಹಿಸಿದರು. ಮುಖ್ಯ ಅತಿಥಿಗಳಾಗಿ ಚಂದ್ರಹಾಸ (ನಿವೃತ್ತ ಭೂ ಸೇನಾ ವಿಭಾಗ), ತಿರುಮಲೇಶ್ವರ ಆರ್ತಾಜೆ (ನಿವೃತ್ತ ಸೈನಿಕ), ಡಾ.ಬಶೀರ್ ಆರ್.ಬಿ, (ಅಧ್ಯಕ್ಷ ಕಾರುಣ್ಯ ಚಾರಿಟೇಬಲ್ ಟ್ರಸ್ಟ್), ಮಧುಸೂದನ್(ಮಾಲಕರು ಪಿ.ಎಂ ಕಾಂಪ್ಲೆಕ್ಸ್ ಪೈಚಾರ್), ತ್ವಾಹ ಶಾಂತಿನಗರ (ಉದ್ಯಮಿ ಸುಳ್ಯ), ಶಾಫಿ ಬೊಳುಬೈಲು ಭಾಗವಹಿಸಿದರು. ಬಶೀರ್ ಆರ್.ಬಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ನ ಸರ್ವ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಗೆ ಸಿಹಿತಿಂಡಿ ಹಾಗೂ ಪಾನೀಯ ವಿತರಿಸಲಾಯಿತು.