ದ್ವಿಚಕ್ರ ವಾಹನ ಸವಾರನೋರ್ವನ ಮೇಲೆ ಕಾಡು ಹಂದಿಯೊಂದು ದಾಳಿ ಮಾಡಿದ ಪರಿಣಾಮ, ಯುಕನೋರ್ವ ಗಾಯಗೊಂಡ ಘಟನೆ ಇಂದು ಮುಂಜಾನೆ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಕುರುಂಜ ಮಣ್ಣಾಪು ಎಂಬಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಧನುಷ್(30) ಗಾಯಗೊಂಡವರು.ಕುಂಬ್ರ ಪೆಟ್ರೋಲ್ ಬಂಕ್ ನಲ್ಲಿ ಮ್ಯಾನೇಜರ್ ಆಗಿರುವ ಧನುಷ್ ಎಂದಿನಂತೆ ಇಂದು ಬೆಳಗ್ಗೆ ಸ್ಕೂಟರ್ ನಲ್ಲಿ ಪೆಟ್ರೋಲ್ ಬಂಕ್ ಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕುರುಂಜ ಮಣ್ಣಾಪು ತಲುಪಿದಾಗ ಏಕಾಏಕಿ ಕಾಡು ಹಂದಿಯೊಂದು ಧನುಷ್ ಚಲಾಯಿಸುತ್ತಿದ್ದ ಸ್ಕೂಟರ್ ಮೇಲೆ ಎರಗಿದೆ. ಈ ವೇಳೆ ಧನುಷ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ಬಳಿಕ ಕಾಡುಹಂದಿ ಧನುಷ್ ಮೇಲೆ ಎರಗಿದ್ದು, ಅವರ ಬಲ ಕೈಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಇದರೊಂದಿಗೆ ಆತನ ಇತರ ದೇಹದ ಭಾಗಗಳಿಗೆ ಗಾಯಗೊಳಿಸಿದೆ. ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
-
ಕಾನ್ಸ್ಟೆಬಲ್ ನೇಮಕಾತಿಗಾಗಿ ದೈಹಿಕ ಪರೀಕ್ಷೆ: 1600 ಮೀ. ಓಟದ ವೇಳೆ ಬಿದ್ದು ಯುವಕ ದುರಂತ ಸಾವು!
ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗಾಗಿ ನಡೆದ ದೈಹಿಕ ಸಾಮರ್ಥ್ಯ ಪರೀಕ್ಷೆಯ ವೇಳೆ 1600 ಮೀಟರ್ ಓಟದಲ್ಲಿ ಯುವಕನೊಬ್ಬ ಬಿದ್ದು ಸಾವಿಗೀಡಾಗಿರುವ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ. ಮಚಲಿಪಟ್ಟಣಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಯುವಕ ಕೊನೆಯುಸಿರೆಳೆದಿದ್ದಾನೆ. ಮೃತ ಅಭ್ಯರ್ಥಿಯನ್ನು ಕೃಷ್ಣ ಜಿಲ್ಲೆಯ ಎ ಕೊಂಡೂರು ಗ್ರಾಮದ ಎನ್. ಚಂದ್ರಶೇಖರ್ (25) ಎಂದು ಗುರುತಿಸಲಾಗಿದೆ. ಆಂಧ್ರ ಪ್ರದೇಶ ರಾಜ್ಯ ಮಟ್ಟದ ನೇಮಕಾತಿ ಮಂಡಳಿಯು ಕಳೆದ ಕೆಲವು ದಿನಗಳಿಂದ ಉದ್ಯೋಗ ನೇಮಕಾತಿ ಪ್ರಕ್ರಿಯೆಯ ಭಾಗವಾಗಿ ಪ್ರಾಥಮಿಕ…
-
ಪುತ್ತೂರು: ಕಂದಕಕ್ಕೆ ಉರುಳಿದ ಕಾರು; ಬಾಲಕನ ಸಮಯಪ್ರಜ್ಞೆಯಿಂದ ಉಳಿಯಿತು 5 ಮಂದಿಯ ಜೀವ
ಚಾಲಕ ನಿದ್ದೆ ಮಂಪರಿಗೆ ಜಾರಿದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ರಸ್ತೆ ಅಂಚಿನ ಕಂದಕಕ್ಕೆ ಉರುಳಿ ಬಿದ್ದಿದೆ. ಈ ವೇಳೆ ಕಾರಿನಲ್ಲಿದ್ದ 10 ವರ್ಷದ ಬಾಲಕನೋರ್ವನ ಸಮಯಪ್ರಜ್ಞೆಯಿಂದ ಸ್ಥಳೀಯರ ಸಹಾಯದಿಂದಾಗಿ ಇತರರನ್ನು ರಕ್ಷಿಸಿದ ಘಟನೆ ಉಪ್ಪಿನಂಗಡಿ ಹೆದ್ದಾರಿಯ ಸೇಡಿಯಾಪು ಬಳಿಯ ಕಾಪು ಎಂಬಲ್ಲಿ ಗುರುವಾರ ಬೆಳಗ್ಗೆ 5.45ರಿಂದ 6 ಗಂಟೆ ಸುಮಾರಿಗೆ ನಡೆದಿದೆ. ಮುಂಡೂರಿನಲ್ಲಿ ನಡೆದಿದ್ದ ಒತ್ತೆಕೋಲದಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಾರು ಪುತ್ತೂರಿನಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದಾಗ ಚಾಲಕ ನಿದ್ದೆ ಮಂಪರಿಗೆ…
-
ನಾಳೆ(ಜ.3) ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ
ಸುಳ್ಯ: 33ಕೆ.ವಿ. ಕಾವು – ಸುಳ್ಯ ಏಕಪಥ ಮಾರ್ಗವನ್ನು ಕೌಡಿಚ್ಚಾರ್ನಿಂದ ಕಾವು ಜಂಕ್ಷನ್ವರೆಗೆ ದ್ವಿಪಥ ಮಾರ್ಗವಾಗಿ ಬದಲಾಯಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜ.3ರಂದು ಪೂರ್ವಾಹ್ನ 9:30 ರಿಂದ ಸಂಜೆ 5:00 ಗಂಟೆಯವರೆಗೆ 33ಕೆ.ವಿ. ಕಾವು ಸುಳ್ಯ ವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 33/11ಕೆ.ವಿ. ಕಾವು ಹಾಗೂ ಸುಳ್ಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕವಿ ಫೀಡರ್ಗಳಿಂದ ವಿದ್ಯುತ್ ಕಡಿತವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.