ಸುಳ್ಯ: ಕಳೆದ ಹಲವು ವಾರಗಳಿಂದ ಸುಳ್ಯ ಮುಖ್ಯ ರಸ್ತೆಯು ಹದೆಗೆಟ್ಟಿದ್ದು ತೀರದ ಸಮಸ್ಯೆಯಾಗಿದೆ. ವಾಹನ ಚಾಲಕರಿಗೆ ಈ ರಸ್ತೆಯಲ್ಲಿ ಹೋಗುವುದಂತು ಬಹು ದೊಡ್ಡ ಸವಾಲು, ಲಕ್ಷಗಟ್ಟಲೆ ಹಣ ನೀಡಿ ತಮ್ಮ ವಾಹನವನ್ನು ಇಂತಹ ಗುಂಡಿಗಳ ಮುಖೇನ ಚಲಾಯಿಸಯವಾಗ ಮನಸ್ಸಲ್ಲಾಗುವ ದುಃಖ ಅಷ್ಟಿಷ್ಟಲ್ಲ,
ಸುಳ್ಯದ ರಥಬೀದಿ ತಿರುವಿನ ಬಳಿಯಿರುವ ರಾಷ್ಟ್ರೀಯ ಹೆದ್ದಾರಿಯ ಅವಸ್ಥೆ ಇದಾಗಿದ್ದು, ಇಲ್ಲಿ ತನಕ ಯಾವುದೇ ಪೂರ್ಣ ಕಾಮಗಾರಿಯಾಗಿಲ್ಲ, ಚಾಲಕರ ಈ ಪರದಾಟವನ್ನು ನೋಡಿದ ಸುಳ್ಯದ ಝಿಯಾದ್ ಹಾಗೂ ಕಯ್ಯೂಮ್ ಕಟ್ಟೆಕ್ಕಾರ್ ತಮ್ಮಿಂದಾಗುವ ಅಳಿಲು ಸೇವೆ ಮಾಡಿದ್ದಾರೆ. ಸಣ್ಣಪುಟ್ಟ ಕಲ್ಲುಗಳನ್ನು ಆ ಗುಂಡಿಗೆ ಹಾಕಿ ಗುಂಡಿ ಮುಚ್ಚಿ ಸಂಚಾರಕ್ಕೆ ಸುಗಮಗೊಳಿಸಿದ್ದಾರೆ. ಈ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.