ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಪಟ್ಟಕ್ಕೆ ಚುನಾವಣೆ ಇಂದು ನಡೆಯಲಿದ್ದು ಅಧ್ಯಕ್ಷತೆಗೆ ಶಶಿಕಲಾ ನೀರಬಿದಿರೆ, ಹಾಗೂ ಉಪಾಧ್ಯಕ್ಷತೆಗೆ ಬುದ್ದ ನಾಯ್ಕ, ರವರು ಚುನಾವಣಾ ಅಧಿಕಾರಿ ಸುಳ್ಯ ತಹಶೀಲ್ದಾರ್ ಮಂಜುನಾಥ್ ಇವರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕಿ ಕು.ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಸುಳ್ಯ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎ ಟಿ ಕುಸುಮಾದರ, ನಗರ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಯಾವುದೇ ಹೆಚ್ಚುವರಿ ನಾಮ ಪತ್ರ ಸಲ್ಲಿಕೆ ಯಾಗದ ಕಾರಣ ಇವರ ಆಯ್ಕೆ ಬಹುತೇಕ ಖಚಿತವಾಗಲಿದೆ. ಮಧ್ಯಾಹ್ನ ನಂತರ ನಾಮಪತ್ರ ಪರಿಶೀಲನೆ ನಡೆಯಲಿದೆ.