ಸುಳ್ಯ: ಆದಿತ್ಯವಾರ ದಂದು ನಿಧನರಾದ ಕೆಸಿಎಫ್ ರಾಷ್ಟ್ರೀಯ ಸಮಿತಿಯ ನಾಯಕನಾಗಿ ಸಮಾಜ ಸೇವೆಯ ಮೂಲಕ ಮೂಲಕ ಎಲ್ಲ ಸುನ್ನಿ ಸಂಘ-ಸಂಸ್ಥೆಗಳ ಸಮಿತಿಗಳಲ್ಲಿ ಮತ್ತು ಸಮಾಜ ಸೇವಾ ಘಟಕಗಳಲ್ಲಿ ಸಕ್ರೀಯವಾಗಿ ತನ್ನನ್ನು ತಾನೇ ತೊಡಗಿಸಿಕೊಂಡಿದ್ದ ಸುಳ್ಯದ ಗಾಂಧಿನಗರ ನಿವಾಸಿ ಬಶೀರ್ ಕಾರ್ಲೆಯರಿಗೆ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅನ್ಸಾರ್ ಗೋಲ್ಡನ್ ಜ್ಯುಬಿಲಿ ಸಭಾ ಭವನದಲ್ಲಿ ಸಾರ್ವಜನಿಕ ಅನುಸ್ಮರಣಾ ಕಾರ್ಯಕ್ರಮ ಯಾಸೀನ್ ಪಾರಾಯಣ, ತಹ್ಲೀಲ್, ದುವಾ ಹಾಗೂ ಅನುಸ್ಮರಣಾ ಮಾತುಗಳೊಂದಿಗೆ ನೆರವೇರಿತು ಕಾರ್ಯಕ್ರಮದಲ್ಲಿ ಹಮೀದ್ ಬೀಜಕೊಚ್ಚಿ ದವಾ ನೇತೃತ್ವವನ್ನು ವಹಿಸಿ ಬಶೀರ್ ರವರ ಒಡನಾಡಿಯಾದ ಹಾರಿಸ್ ಪೇರಡ್ಕ , ಉಮ್ಮರ್ ಬೀಜದಕಟ್ಟೆ, ಟಿ.ಯಂ ಶಹೀದ್, ಮುಸ್ತಫ ಕೆ.ಯಂ , ಅಬ್ದುಲ್ ಕಲಾಂ ಬೀಜಕೊಚ್ಚಿ ಮೊದಲಾವರು ಶ್ರೀಯುತರ ಗುಣಗಾನಗೈದರು.
ವೇದಿಕೆಯಲ್ಲಿ ಗಾಂಧಿನಗರ ಜಮಾಅತ್ ಅಧ್ಯಕ್ಷರಾದ ಹಾಜಿ ಮಹಮ್ಮದ್ ಕೆಯಂಎಸ್, ಅನ್ಸಾರ್ ಅಧ್ಯಕ್ಷರಾದ ಹಾಜಿ ಅಬ್ದುಲ್ಲ ಕಟ್ಟೆಕ್ಕಾರ್, ನ.ಪಂ ಮಾಜಿ ಅಧ್ಯಕ್ಷರಾದ ಎಸ್.ಸಂಶುದ್ದೀನ್, ಅನ್ಸಾರಿಯ ಅಧ್ಯಕ್ಷರಾದ ಹಾಜಿ ಅಬ್ದುಲ್ ಮಜೀದ್ ಜನತ, ಅನ್ಸಾರಿಯ ಕೋಶಾಧಿಕಾರಿ ಹಾಜಿ ಆದಂ ಕಮ್ಮಾಡಿ, ಜಮಾಹತ್ ನಿರ್ದೇಶಕರಾದ ಹಾಜಿ ಅಬ್ದುಲ್ ಹಮೀದ್ ಬಿಳಿಯಾರ್ , ಹಾಜಿ ಅಬ್ದುಲ್ ಹಮೀದ್ ಜನತ, ಅನ್ಸಾರಿಯ ಉಪಾಧ್ಯಕ್ಷ ಅಬೂಬಕ್ಕರ್ ಎಸ್.ಪಿ, ಅನ್ಸಾರ್ ಉಪಾಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಪಾರೆ ಅನ್ಸಾರ್ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್ , ರಹೀಂ ಕಟ್ಟೆಕ್ಕಾರ್ , ಹ್ಯಾರಿಸ್ ಪರಿವಾರಖಾನ , ಅಹಮದ್ ಪಾರೆ ಮೊದಲಾದವರು ಉಪಸ್ತಿತರಿದ್ದರು. ಬಶೀರ್ ರವರ ಬಾಲ್ಯ ಸ್ನೇಹಿತರಾದ ಅಬ್ದುಲ್ ಲತೀಫ್ ಎಂ.ಕೆ, ಹನೀಫ್ ಬುಶ್ರ, ಅಬ್ದುಲ್ ಮಜೀದ್ ಕೆ.ಬಿ, ರಿಫಾಯಿ ಜನತ ಮೊದಲಾದವರು ಸಹರಿಸಿದರು ಕೆ.ಬಿ ಇಬ್ರಾಹಿಂ ಸ್ವಾಗತಿಸಿ ಟ್ರಸ್ಟ್ ಅಧ್ಯಕ್ಷ ರಿಯಾಝ್ ಕಟ್ಟೆಕ್ಕಾರ್ ವಂದಿಸಿದರು…