ಅರ್ತಾಜೆ ಫ್ರೆಂಡ್ಸ್ ಕ್ಲಬ್ (AFC) ಪೈಚಾರ್, ಸುಳ್ಯ ಸತತ ಯಶಸ್ವಿ 6 ಆವೃತ್ತಿಗಳ ಕಬಡ್ಡಿ ಪಂದ್ಯಾಟ ನಂತರ, AFC ಇದರ ಆಶ್ರಯದಲ್ಲಿ ಹೊನಲು ಬೆಳಕಿನ ಆಹ್ವಾನಿತ ಐದು ತಂಡಗಳ ಸೀಸನ್ 7ರ ಪ್ರೋ ಮಾದರಿಯ ಕಬಡ್ಡಿ ಪಂದ್ಯಾಟ ಹಾಗೂ ಸನ್ಮಾನ ಕಾರ್ಯಕ್ರಮ ಇದೇ ಬರುವ ಡಿಸೆಂಬರ್ 17 ರಂದು ಶಾಂತಿನಗರ ಸ್ಟೇಡಿಯಂ ನಲ್ಲಿ ನಡೆಯಲಿದೆ.

ಶಾಫಿ ಪ್ರಗತಿ ಮಾಲೀಕತ್ವದ ಪ್ರಗತಿ ವಾರಿಯರ್ಸ್, ಅಶ್ರಫ್ ಮಾಲೀಕತ್ವದ ಎಸ್.ಎ ಫೈಟರ್ಸ್, ರಿಫಾಯಿ ಮಾಲೀಕತ್ವದ ಅಸ್ತ್ರಾ ಟ್ರಾನ್ಸ್ ಪೋರ್ಟ್, ರಫೀಕ್ ಮಾಲೀಕತ್ವದ ಲಾರಾ ಬುಲ್ಸ್, ಹನೀಫ್ ಮಾಲೀಕತ್ವದ ಬಿ.ಎಫ್.ಸಿ ಯುನೈಟೆಡ್ ತಂಡಗಳು ಭಾಗವಹಿಸಲಿದೆ. ಹಾಗೂ ಕಬಡ್ಡಿ ಕ್ರೀಡಾಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ನಾಡಿನ ಹೆಸರನ್ನು ಪಸರಿಸಿದ ಮಾಜಿ ಕಬಡ್ಡಿ ಆಟಗಾರ ‘ಅಬ್ದುಲ್ ಜಬ್ಬಾರ್’

ಇವರಿಗೆ ಅದ್ದೂರಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಹಾಗೂ ಪಂದ್ಯಾಟದ ನೇರ ಪ್ರಸಾರ ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಲಿದೆ ಎಂದು ಸಂಘಟಕರಾದ ರಶೀದ್ (ಅಚ್ಚಿ), ಮುಜೀಬ್, ಮಜೀದ್ ತಿಳಿಸಿದ್ದಾರೆ.