ಸುನ್ನಿ ಮುಸ್ಲಿಂ ಜುಮಾ ಕೊಯನಾಡು ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಬೃಹತ್ ಕಾಲ್ನಡಿಗ ಜಾಥಾ
ಮಾಜಿ ಜಿಲ್ಲಾ ವಕ್ಫ್ ಸದಸ್ಯ ಮೊಯಿದಿನ್ ಕುಂಞ ರವರು ಯುವ ಮುಖಂಡ ರಾದ ಹನೀಫ್ ಎಸ್ ಪಿ ರವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾ ಗೆ ಚಾಲನೆ ನೀಡಲಾಯಿತು
ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು ವತಿಯಿಂದ ಬೆಳಗ್ಗೆ 9 ಗಂಟೆಗೆ ಕೊಯನಾಡು ಮಸೀದಿಯಿಂದ ಚೆಡಾವು ವರೆಗೂ ಬೃಹತ್ ಜಾಥಾ ನಡೆಯಿತು, ಸುಬುಲು ಸ್ಸಲಾಂ ಮದ್ರಸ ವಿದ್ಯಾರ್ಥಿಗಳಿಂದ ಆಕರ್ಷಣ ಶೈಲಿಯ ಧಫ್ ಹಾಗೂ ವಿಧ್ಯಾರ್ಥಿಗಳಿಂದ ಮಿಲಾದ್ ಘೋಷಣೆ ಕೂಗುತ್ತಾ ಸಾಗಿ ಬಂತು, ಜಾಥಾದಲ್ಲಿ ಊರಿನವರು, ಪೋಷಕರು,ಯುವಕರು, ಸರ್ವ ಜಮಾಅತರು ಭಾಗವಹಿಸಿದ್ದರು, ರ್‍ಯಾಲಿಯಲ್ಲಿ ವಿವಿಧ ಜಮಾತ್ ಸದಸ್ಯರಿಂದ ತಂಪು ಪಾನೀಯ ಸಿಹಿ ತಿಂಡಿ ವಿತರಿಸಲಾಯಿತು, ಯಶಸ್ವಿಯಾಗಿ ವಿಜ್ರಂಬಣೆಯಿಂದ ಜಾಥಾ ಸಾಗಿ ಬಂತು