ಬೆಳ್ತಂಗಡಿ : ಜೀವನದಲ್ಲಿ ಜಿಗುಪ್ಸೆಗೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕಾಶಿಪಟ್ಣ ಗ್ರಾಮದ ಉರ್ದು ಗುಡ್ಡೆಯಲ್ಲಿ ನಡೆದಿದೆ.
ನೊಣಯ್ಯ ಪೂಜಾರಿ(63 ವರ್ಷ) ಮತ್ತು ಅವರ ಪತ್ನಿ ಬೇಬಿ (46 ವರ್ಷ) ಆತ್ಮಹತ್ಯೆ ಮಾಡಿಕೊಂಡ ದಂಪತಿಯಾಗಿದ್ದಾರೆ. ಮನೆಯ ಸಮೀಪದ ಕಾಡಿನಲ್ಲಿ ಗುರುವಾರ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನೊಣಯ್ಯ ಪೂಜಾರಿ ಕಳೆದ ಐದು ವರ್ಷಗಳಿಂದ ವಿಪರೀತ ತಲೆನೋವಿನಿಂದ ಬಳಲುತ್ತಿದ್ದರೆ ಪತ್ನಿ ಬೇಬಿ ಮಕ್ಕಳಿಲ್ಲದ ಕೊರಗಲ್ಲಿದ್ದರು ಎಂಬ ಮಾಹಿತಿ ಲಭಿಸಿದೆ. ನೋಣಯ್ಯ ಪೂಜಾರಿಯವರಿಗೆ ಇದು ಎರಡನೇ ಮದುವೆ ಯಾಗಿದ್ದು ಹಿಂದಿನ ಪತ್ನಿ ಕಳೆದ ಹತ್ತು ವರ್ಷದ ಹಿಂದೆ ಸಾವನ್ನಪ್ಪಿದರು. ಬಳಿಕ ಬೇಬಿ ಅವರನ್ನು ವಿವಾಹವಾಗಿದ್ದರು. ಮೊದಲನೆ ಪತ್ನಿಗೆ ಐದು ಗಂಡು, ಒಂದು ಹೆಣ್ಣು ಮಕ್ಕಳಿದ್ದರು.ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ